Asianet Suvarna News Asianet Suvarna News

ಗೃಹಜ್ಯೋತಿ ಯೋಜನೆ: ಜೂನ್‌.25ರ ನಂತರ ನೋಂದಣಿ ಮಾಡಿದವರಿಗೆ ಫ್ರೀ ಬಿಲ್‌ ಇಲ್ಲ..!

ಮೀಟರ್‌ನಲ್ಲಿ ಹೆಸರು ಬದಲಾಯಿಸಲು ಭಾರೀ ಸಂಖ್ಯೆಯಲ್ಲಿ ಅರ್ಜಿ
ಆಧಾರ್‌ ಕಾರ್ಡ್‌ಗೆ ನೀಡಿರುವ ಮೊಬೈಲ್ ಸಂಖ್ಯೆ ಅಲಭ್ಯವಾಗಿದೆ
ಎಸ್ಕಾಂಗಳಲ್ಲಿ ಕೂಡಲೇ ಹೆಸರು ಬದಲಾವಣೆ ಮಾಡುವುದು ಅಸಾಧ್ಯ

ಬೆಂಗಳೂರು: ಗೃಹಜ್ಯೋತಿ ಯೋಜನೆಯ (GruhaJyoti Yojana) ಅಧಿಕೃತ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಆಗಸ್ಟ್ 1 ಮಂಗಳವಾರದಿಂದ ಉಚಿತ ವಿದ್ಯುತ್ ಬಿಲ್(Free Current bill) ಬರಲಿದೆ. ಇದು ಜುಲೈ ತಿಂಗಳಲ್ಲಿ ನೋಂದಣಿ ಮಾಡಿಸಿದ್ದವರಿಗೆ ಮಾತ್ರ ಜೀರೋ ಬಿಲ್(Zero bill) ಬರಲಿದೆ. ಜುಲೈ 25ರವರೆಗೆ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ ಗೃಹಜ್ಯೋತಿ ಲಾಭ ಸಿಗಲಿದ್ದು, ಜುಲೈ 25ರ ನಂತರ ನೋಂದಣಿ ಮಾಡಿದವರಿಗೆ ಆಗಸ್ಟ್‌ ತಿಂಗಳಿನಲ್ಲಿ ಉಚಿತ ಬಿಲ್ ಬರುವುದಿಲ್ಲ. ಇಲ್ಲಿವರೆಗೆ 1,18,50,474 ಫಲಾನುಭವಿಗಳಿಂದ ಗೃಹಜ್ಯೋತಿಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಎರಡೂವರೆ ಕೋಟಿ ಫಲಾನುಭವಿಗಳಲ್ಲಿ ಶೇ.60ರಷ್ಟು ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಶೇ.40ರಷ್ಟು ಜನ ಅರ್ಜಿ ಸಲ್ಲಿಸುವುದು ಬಾಕಿ ಇದೆ. ಜುಲೈ 25ರ ನಂತರ ಅರ್ಜಿ ಸಲ್ಲಿಸಿದವರಿಗೆ ಸೆಪ್ಟೆಂಬರ್ ಬಿಲ್ ಫ್ರೀ ಸಿಗಲಿದೆ.ಆರ್.ಆರ್.ನಂಬರ್‌ನಲ್ಲಿರುವ ಹೆಸರು, ಆಧಾರ್ ಹೆಸರು ಮ್ಯಾಚ್ ಆಗ್ತಿಲ್ಲ. ಶೇ.25ರಷ್ಟು ಕರೆಂಟ್ ಮೀಟರ್ ಪೂರ್ವಿಕರ ಹೆಸರಿನಲ್ಲಿದೆ. ಮೃತಪಟ್ಟಿರುವವರ ಹೆಸರಿನಲ್ಲಿರುವ ಮೀಟರ್‌ಗಳೇ ಹೆಚ್ಚು. ಬಹುತೇಕ ಮಾಲೀಕರಿಗೆ ಮಾಲೀಕರ ಕಲಂನಲ್ಲಿ ಅರ್ಜಿ ಸಲ್ಲಿಸಲಾಗ್ತಿಲ್ಲ. ಮೃತಪಟ್ಟ ಹಿರಿಯರ ಹೆಸರಿನಲ್ಲಿ ಮೀಟರ್ ಇರುವುದರಿಂದ ಸಮಸ್ಯೆಯಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಹುಲಿಗಳ ಸಂರಕ್ಷಣೆಯಲ್ಲಿ ‘ಕರ್ನಾಟಕ’ ದಿ ಬೆಸ್ಟ್‌: ಮಧ್ಯಪ್ರದೇಶ ಫಸ್ಟ್‌.. ಕರ್ನಾಟಕಕ್ಕೆ 2ನೇ ಸ್ಥಾನ !