ಜನಾರ್ದನ ರೆಡ್ಡಿ ಮಾಡಿದಷ್ಟು ಅಭಿವೃದ್ಧಿ ನಾನು ಮಾಡೋಕೆ ಆಗಿಲ್ಲ: ಶ್ರೀರಾಮುಲು ಶ್ಲಾಘನೆ

ಜನಾರ್ದನ ರೆಡ್ಡಿ (Janardhana Reddy) ಮಾಡಿದಷ್ಟು ಅಭಿವೃದ್ಧಿ ನಾನು ಮಾಡೋಕೆ ಆಗಿಲ್ಲ. ಕ್ಯಾಬಿನೆಟ್‌ನಲ್ಲಿ ರೆಡ್ಡಿ ಮಾತನಾಡಿದ್ರೆ ಆ ಖದರ್ ಬೇರೇನೆ ಇರುತ್ತೆ. ರೆಡ್ಡಿಯವರು ಇದು ನಮಗೆ ಬೇಕು ಅಂದ್ರೆ ಸಿಎಂ ತಕ್ಷಣ ಕೊಡ್ತಿದ್ರು' ಎಂದು ಜನಾರ್ದನ ರೆಡ್ಡಿಯವರ ಕಾರ್ಯವೈಖರಿಯನ್ನು ಶ್ರೀರಾಮುಲು (Sriramulu) ಹೊಗಳಿದ್ದಾರೆ. 

Share this Video
  • FB
  • Linkdin
  • Whatsapp

ಬಳ್ಳಾರಿ (ಫೆ. 07): ಜನಾರ್ದನ ರೆಡ್ಡಿ (Janardhana Reddy) ಮಾಡಿದಷ್ಟು ಅಭಿವೃದ್ಧಿ ನಾನು ಮಾಡೋಕೆ ಆಗಿಲ್ಲ. ಕ್ಯಾಬಿನೆಟ್‌ನಲ್ಲಿ ರೆಡ್ಡಿ ಮಾತನಾಡಿದ್ರೆ ಆ ಖದರ್ ಬೇರೇನೆ ಇರುತ್ತೆ. ರೆಡ್ಡಿಯವರು ಇದು ನಮಗೆ ಬೇಕು ಅಂದ್ರೆ ಸಿಎಂ ತಕ್ಷಣ ಕೊಡ್ತಿದ್ರು' ಎಂದು ಜನಾರ್ದನ ರೆಡ್ಡಿಯವರ ಕಾರ್ಯವೈಖರಿಯನ್ನು ಶ್ರೀರಾಮುಲು (Sriramulu) ಹೊಗಳಿದ್ದಾರೆ. 

Uttar Pradesh Election: ಯೋಗಿ ಮತ್ತೆ ಸಿಎಂ ಆಗಬೇಕು, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಭಕ್ತನ ಪಾದಯಾತ್ರೆ

ಸಾರಿಗೆ ಸಚಿವ ಬಿ.ಶ್ರೀರಾಮುಲು ದಿಢೀರ್‌ ದೆಹಲಿಗೆ ದೌಡಾಯಿಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ರಾಜಕೀಯದಲ್ಲಿ ಸಕ್ರಿಯವಾಗಲು ಜನಾರ್ದನ ರೆಡ್ಡಿ ಆಸಕ್ತಿ ವಹಿಸಿದ್ದು, ರೆಡ್ಡಿಗೆ ರಾಜಕೀಯಾಶ್ರಯ ಒದಗಿಸಲು ಕೇಂದ್ರದ ನಾಯಕರ ಜತೆ ಶ್ರೀರಾಮುಲು ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರುಗಳ ಜೊತೆ ಚರ್ಚಿಸಲು ದೆಹಲಿಗೆ ತೆರಳಿದ್ದೇನೆಯೇ ಹೊರತು, ಜನಾರ್ದನ ರೆಡ್ಡಿಯ ರಾಜಕೀಯ ಭವಿಷ್ಯ ರೂಪಿಸಲು ಅಲ್ಲ ಎಂದು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.

Related Video