ಸಿದ್ದರಾಮಯ್ಯ ಮುಡಾ ಕೇಸ್: ಪ್ರಾಸಿಕ್ಯೂಷನ್ ಕೊಟ್ಟ ರಾಜ್ಯಪಾಲರ ಮೂಲಕ ಮೋದಿ ಟಾರ್ಗೆಟ್ ಮಾಡಿದ ಕಾಂಗ್ರೆಸ್!

ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರ ಕೊರಳಿಗೆ ಮುಡಾ ಹಗರಣದ ಕೇಸ್ ಸುತ್ತಿಕೊಂಡಿದ್ದು, ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೋಟೀಸ್ ನೀಡಿದ್ದಾರೆ. 

First Published Aug 18, 2024, 2:52 PM IST | Last Updated Aug 18, 2024, 2:52 PM IST

ಸಿಎಂ ಸಿದ್ದರಾಮಯ್ಯನವರ ಕೊರಳಿಗೆ ಮುಡಾ ಪ್ರಕರಣ ಉರುಳಾಗಿ ಸುತ್ತಿಕೊಂಡಿದೆ. ಇಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಈ ಕೇಸ್‌ಗೆ ಸಂಬಂಧಿಸಿದಂತೆ ಸಿದ್ದರಾಮಯ್ಯವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆದ್ರೆ, ಸಿಎಂ ಸೇರಿದಂತೆ ಕಾಂಗ್ರೆಸ್ ಪಕ್ಷ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ. ಈಗ ಕಾಂಗ್ರೆಸ್ ಕಾನೂನು ಹೋರಾಟ ಮುಂದುವರೆಸಲಿದೆ. ಆದ್ರೆ ಇಲ್ಲಿರುವ ಪ್ರಮುಖ ವಿಚಾರವೇನೆಂದರೆ, ಈಗಾಗಲೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗಿದೆ. ಹೀಗಾಗಿ, ಸಿಎಂ ರಾಜೀನಾಮೆ ಕೊಡ್ತಾರಾ ಅಥವಾ ಸಿಎಂ ಆಗಿ ಇದ್ದುಕೊಂಡೇ ಹೋರಾಟ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. 

ಬೆಂಗಳೂರು ವಿದ್ಯಾರ್ಥಿನಿ ರೇಪ್ ಕೇಸ್‌ಗೆ ಟ್ವಿಸ್ಟ್; ಬೈಕ್‌ನಲ್ಲಿ ಡ್ರಾಪ್ ಕೊಡೋದಾಗಿ ಶೆಡ್‌ಗೆ ಕರೆದೊಯ್ದ ಕಾಮುಕ

ಮುಡಾ ಕೇಸ್‌ನಲ್ಲಿ ತೆಗೆದುಕೊಳ್ಳಲಾದ ರಾಜ್ಯಪಾಲರ ತೀರ್ಮಾನವೇ ಸರಿ ಇಲ್ಲವೆಂದು ಕಾಂಗ್ರೆಸ್ ಹೇಳುತ್ತಿದೆ. ಹೀಗಾಗಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಅನ್ನುವುದನ್ನೂ ಕಾಂಗ್ರೆಸ್ ಹೇಳುತ್ತಿದೆ. ಹಾಗಾದರೆ, ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾನೂನು ಹೋರಾಟಕ್ಕೆ ಮುಂದಾಗಿದೆ. ರಾಜ್ಯಪಾರ ಈ ನಿರ್ಧಾರದ ವಿರುದ್ಧ ಕಾಂಗ್ರೆಸ್ ರಾಜಕೀಯ ಹೋರಾಟವನ್ನೂ ಮಾಡಲಿದೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದರ ವಿರುದ್ಧ ಕಾನೂನು ಹೋರಾಟ ಮಾತ್ರವಲ್ಲದೇ, ಕಾಂಗ್ರೆಸ್ ರಾಜಕೀಯ ಹೋರಾಟವನ್ನೂ ಮಾಡಲಿದೆ.

ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಕಾನೂನು ಮತ್ತು ರಾಜಕೀಯ ಹೋರಾಟವನ್ನು ಮಾಡುತ್ತಿದೆ. ಇದೆಲ್ಲರ ಮಧ್ಯ ಈ ಪ್ರಕರಣ ಮುಂದೆ ಯಾವ ಹಂತ ತಲುಪಲಿದೆ ಅನ್ನೋದನ್ನು ನೋಡಬೇಕಿದೆ.

Video Top Stories