Asianet Suvarna News Asianet Suvarna News

ಬೆಂಗಳೂರು ವಿದ್ಯಾರ್ಥಿನಿ ರೇಪ್ ಕೇಸ್‌ಗೆ ಟ್ವಿಸ್ಟ್; ಬೈಕ್‌ನಲ್ಲಿ ಡ್ರಾಪ್ ಕೊಡೋದಾಗಿ ಶೆಡ್‌ಗೆ ಕರೆದೊಯ್ದ ಕಾಮುಕ

ಬೆಂಗಳೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಯುವತಿಯನ್ನು ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. 

Maharashtra degree college girl raped attempt by bike rider in Bengaluru shed sat
Author
First Published Aug 18, 2024, 1:07 PM IST | Last Updated Aug 18, 2024, 1:07 PM IST

ಬೆಂಗಳೂರು (ಆ.18): ಬೆಂಗಳೂರಿನಲ್ಲಿ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಮೊದಲು ಆಟೋದಲ್ಲಿ ಕರೆದೊಯ್ದು ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಕರೆದೊಯ್ದ ವ್ಯಕ್ತಿಯೇ ಯುವತಿಯನ್ನು ನಿರ್ಜನ ಪ್ರದೇಶದ ಶೆಡ್‌ಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಯುವತಿಯ ಬಟ್ಟೆಯನ್ನು ಹರಿದು ಘಾಸಿಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.

ಹೆಚ್ ಎಸ್ ಆರ್ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಾಚಾರ ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಅವರು, ಈ ಘಟನೆ ನಿನ್ನೆ ರಾತ್ರಿ ಸುಮಾರು 1 ಗಂಟೆ ಸುಮಾರಿಗೆ ನಡೆದಿದೆ. ಸಂತ್ರಸ್ತ ಯುವತಿ ಮಹಾರಾಷ್ಟ್ರ ಮೂಲದವಳಾಗಿದ್ದು, ಆನೇಕಲ್ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಳು. ನಿನ್ನೆ ಸ್ನೇಹಿತನ ಜೊತೆಗೆ ಕೋರಮಂಗಲದ ರೆಸ್ಟೋರೆಂಟ್‌ನಲ್ಲಿ ಡಿನ್ನರ್ ಪಾರ್ಟಿಗೆ ಹೋಗಿದ್ದಾಳೆ. ನಂತರ ರಾತ್ರಿ ವೇಳೆ ವಾಪಸ್ ರೂಮಿಗೆ ಹೋಗುವಾಗ ಯುವತಿ ಸ್ನೇಹಿತನ ಕಾರನ್ನ ತಾನೇ ಓಡಿಸೋದಾಗಿ ಹೇಳಿ ಕಾರು ಚಾಲನೆ ಮಾಡಿದ್ದಾಳೆ. ಆದರೆ, ಕಾರನ್ನು ಸರಿಯಾಗಿ ಓಡಿಸಲು ಬರದೇ ಮೂರು ಆಟೋಗಳಿಗೆ ಟಚ್ ಮಾಡಿದ್ದಾಳೆ. ಆಟೋ ಚಾಲಕರು ಯುವತಿ ಮೇಲೆ ಗಲಾಟೆ ಮಾಡಲು ಮುಂದಾಗುದ್ದಾರೆ. ಆಗ ಯುವತಿ ಭಯದಿಂದ ಪೊಲೀಸರ ಸಹಾಯವಾಣಿ 112ಗೆ ಕರೆ ಮಾಡಿದ್ದಾಳೆ ಎಂದು ತಿಳಿಸಿದರು.

ಬಂಗಾಳದ ವೈದ್ಯ ವಿದ್ಯಾರ್ಥಿನಿ ಬೆನ್ನಲ್ಲೇ, ಬೆಂಗಳೂರಿನ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ?

ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ತನ್ನನ್ನು ವಶಕ್ಕೆ ಪಡೆಯಬಹುದು ಎಂಬ ಭಯದಿಂದ ಯುವತಿ ಅಲ್ಲಿಂದ ತನ್ನ ರೂಮಿಗೆ ಹೋಗಲು ತಡರಾತ್ರಿ ವೇಳೆ ಅಪರಿಚಿತ ಬೈಕ್ ಸವಾರರಿಗೆ ಅಡ್ಡ ಹಾಕಿ ಡ್ರಾಪ್ ಕೇಳಿದ್ದಾಳೆ. ಆಗ ಒಬ್ಬ ಬೈಕ್ ಸವಾರ ನಾನು ಆಕಡೆಗೆ ಹೋಗುವುದಿಲ್ಲ ಎಂದು ಹೇಳಿದ್ದಾನೆ. ಅದೇ ಮಾರ್ಗದಲ್ಲಿ ಮತ್ತೊಬ್ಬ ಬೈಕ್ ಸವಾರ ಬಂದಾಗ ಆತನನ್ನು ಗೋಗರೆದು ತನ್ನನ್ನು ಡ್ರಾಪ್ ಮಾಡುವಂತೆ ಕೇಳಿದ್ದಾಳೆ. ಆಗ ಬೈಕ್‌ನವನು ಡ್ರಾಪ್ ಮಾಡಲು ಒಪ್ಪಿಕೊಳ್ಳುತ್ತಿದ್ದಂತೆ ಸ್ನೇಹಿತನನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾಳೆ ಎಂದು ಮಾಹಿತಿ ನೀಡಿದರು.

ಬೈಕ್‌ನಲ್ಲಿ ಯುವತಿ ಕುಳಿತ ನಂತರ ತನ್ನ ಮೊಬೈಲ್‌ನಲ್ಲಿದ್ದ ಅಲರ್ಟ್ ಆಪ್ ಆನ್ ಮಾಡಿ ತನ್ನ ಸ್ನೇಹಿತೆ ಹಾಗೂ ಅಪ್ಪನಿಗೆ ತುರ್ತು ಸಹಾಯದ ಕುರಿತ ಸಂದೇಶ ಹೋಗುವಂತೆ ಲೊಕೇಷನ್ ಆನ್ ಮಾಡಿದ್ದಾಳೆ. ಅಷ್ಟೊತ್ತಿಗಾಗಲೇ ಮುಖ್ಯ ರಸ್ತೆಯನ್ನು ಬಿಟ್ಟು ಒಳ ರಸ್ತೆಯಲ್ಲಿ ಸಾಗಿದ್ದ ಬೈಕ್ ಸವಾರ ಖಾಲಿ ಶೆಡ್ ಬಳಿ ಬೈಕ್ ನಿಲ್ಲಿಸಿ ಆಕೆಯನ್ನು ಶೆಡ್‌ನೊಳಗೆ ಕೂಡಿಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟೊತ್ತಿಗಾಗಲೇ ಆಕೆಯ ಸ್ನೇಹಿತೆ ಪೊಲೀಸರನ್ನು ಸಂಪರ್ಕಿಸಿ ಯುವತಿ ಇರುವ ಲೈವ್ ಲೊಕೇಷನ್ ಸ್ಥಳಕ್ಕೆ ತಲುಪಿದ್ದಾಳೆ ಎಂದರು.

ಮುಂಬೈ: ರಾತ್ರಿಪಾಳಿಯಲ್ಲಿದ್ದ ಮಹಿಳಾ ವೈದ್ಯೆ ಮೇಲೆ ರೋಗಿ ಹಾಗೂ ಆತನ ಕುಡುಕ ಗ್ಯಾಂಗ್‌ನಿಂದ ಹಲ್ಲೆ

ಪೊಲೀಸರ ವಾಹನ ಶೆಡ್ ಬಳಿಗೆ ಹೋಗುತ್ತಿದ್ದಂತೆ ಬೈಕ್‌ನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ಅಲ್ಲಿಂದ ಪರಾರಿ ಆಗಿದ್ದಾನೆ. ಆದರೆ, ಇದಕ್ಕೂ ಮೊದಲೇ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ವಿರೋಧ ಮಾಡಿದಾಗ ಆಕೆಯನ್ನು ಥಳಿಸಿ, ಮೈಮೇಲಿದ್ದ ಬಟ್ಟೆಯನ್ನು ಹರಿದು ಹಾಕಿದ್ದಾನೆ. ಪೊಲೀಸರು ಯುವತಿಯನ್ನು ನೋಡಿದಾಗ ಹರಿದ ಬಟ್ಟೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದಳು. ನಂತರ ಅಲ್ಲಿಯೇ ಪಕ್ಕದ ಗೂಡ್ಸ್ ವಾಹನವೊಂದರಲ್ಲಿದ್ದ ಟಾರ್ಪಲ್ ಸುತ್ತಿಕೊಂಡು ಯುವತಿಯನ್ನು ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದರು.

ಈ ಘಟನೆಯಲ್ಲಿ ಯುವತಿ ಮೇಲೆ ಹಲ್ಲೆ, ಲೈಂಗಿಕ ದೌರ್ಜನ್ಯ ಆಗಿರುವುದು ಖಚಿತವಾಗಿದೆ. ಆದರೆ, ಅತ್ಯಾಚಾರ ಆಗಿದೆಯೋ ಇಲ್ಲವೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈಗಾಗಲೇ ವೈದ್ಯಕೀಯ ಪರೀಕ್ಷೆಯನ್ನು ಮಾಡಲಾಗಿದ್ದು, ವರದಿ ಬಂದ ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದರು.

Latest Videos
Follow Us:
Download App:
  • android
  • ios