Assembly Election 2023: ಸ್ಪರ್ಧಿಸಲು ಶಿವರಾಮೇ ಗೌಡ ಪೂರ್ವ ತಯಾರಿ,ಗೋ ಅಹೆಡ್ ಅಂದ್ರಾ ದೇವೇಗೌಡ್ರು.?

ಹಿಂದೆ ಆಗಿರುವ ಮಾತುಕತೆಯಂತೆ ದೇವೇಗೌಡರು (Devegowda) ನನಗೆ ಗೋ-ಹೇಡ್‌ ಎಂದಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಜೊತೆ ಮಾತನಾಡದೆ ನಾನು ನಾಗಮಂಗಲದಲ್ಲಿ ಬಂದು ಮೀಟಿಂಗ್‌ ಮಾಡ್ತೀನಾ?: ಶಿವರಾಮೇ ಗೌಡ

Share this Video
  • FB
  • Linkdin
  • Whatsapp

ಬೆಂಗಳೂರು (ಜ. 31): ನಾನು ವಿಧಾನಪರಿಷತ್‌ ಚುನಾವಣೆಗೆ (MLC Election) ಸ್ಪರ್ಧಿಸಿದ್ದಾಗ 27 ಕೋಟಿ ರು. ಹಣ ಖರ್ಚು ಮಾಡಿದ್ದೆ. ಆರು ತಿಂಗಳ ಅವಧಿಯ ಲೋಕಸಭೆ ಉಪಚುನಾವಣೆಗೆ ಸ್ಪರ್ಧಿಸಿದ್ದಾಗ 30 ಕೋಟಿ ರು. ಹಣ ಖರ್ಚಾಯಿತು. ಮುಂದಿನ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣೆಗೂ 30 ಕೋಟಿ ರು. ಹಣ ಬೇಕು. ಅಷ್ಟು ಹಣವನ್ನು ತಂದೇ ತರುತ್ತೇನೆ. ಎಲೆಕ್ಷನ್‌ಗೆ ನಿಂತೇ ನಿಲ್ತೇನೆ. ನಿಮ್ಮ ಬೆಂಬಲ ನನಗೆ ಬೇಕು. ಇವು 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಪೂರ್ವ ತಯಾರಿ ಆರಂಭಿಸಿರುವ ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ (LR Shivarame Gowda) ಅವರು ಕೊಪ್ಪ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತೆ ಸುನೀತಾ ಎಂಬುವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ ಆಡಿರುವ ಮಾತುಗಳು ವೈರಲ್ ಆಗಿವೆ. 

Add Asianetnews Kannada as a Preferred SourcegooglePreferred

ಹಿಂದೆ ಆಗಿರುವ ಮಾತುಕತೆಯಂತೆ ದೇವೇಗೌಡರು ನನಗೆ ಗೋ-ಹೇಡ್‌ ಎಂದಿದ್ದಾರೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಜೊತೆ ಮಾತನಾಡದೆ ನಾನು ನಾಗಮಂಗಲದಲ್ಲಿ ಬಂದು ಮೀಟಿಂಗ್‌ ಮಾಡ್ತೀನಾ? ನನ್ನ ಹೆಸರು ಅನೌನ್ಸ್‌ ಆದ ನಂತರ ನನ್ನ ಬೆಂಬಲಕ್ಕೆ ಬರಬೇಕು ಎಂದರು.

Related Video