
News Hour: ರಾಗಿಗುಡ್ಡದಲ್ಲಿ ಅಕ್ಷರ ಕಲಿಸಿದ ಶಿಕ್ಷಕರ ಮನೆಗೂ ಮುಸ್ಲಿಂ ಪುಂಡರು ದಾಳಿ
ಬಿಜೆಪಿ ತನ್ನ ಸತ್ಯಶೋಧನಾ ಸಮಿತಿ ಗುರುವಾರ ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡಿತು. ಗಲಭೆಯಲ್ಲಿ ಹಾನಿಯಾದ ಮನೆಗಳಿಗೆ ನಾಯಕರು ಭೇಟಿ ನೀಡಿದ್ದಾರೆ. ಈ ವೇಳೆ ಬಿಜೆಪಿ ನಾಯಕರ ಎದುರು ಸಂತ್ರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು (ಅ.5): ಶಿವಮೊಗ್ಗದ ರಾಗಿಗುಡ್ಡದಲ್ಲಿ ಗುರುವಾರ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿತು. ಈ ವೇಳೆ ಉರ್ದು ಶಾಲೆಯ ಶಿಕ್ಷಕಿ ಪತಿ ಮಾತನಾಡಿದ್ದು, ತಮ್ಮ ಪತ್ನಿಯ ಸಾಕಷ್ಟು ವಿದ್ಯಾರ್ಥಿಗಳೇ ಮನೆಗೆ ಕಲ್ಲು ಹೊಡೆದಿದ್ದಾರೆ. ಇದನ್ನು ನೋಡೋಕೆ ಬೇಸರವಾಗಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಶಿವಮೊಗ್ಗದ ರಾಗಿಗುಡ್ಡಕ್ಕೆ ಭೇಟಿ ನೀಡುವ ಮುನ್ನ ಗಲಭೆಯಲ್ಲಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದವರನ್ನು ಬಿಜೆಪಿ ನಾಯಕರು ಭೇಟಿ ಮಾಡಿ ಧೈರ್ಯ ತುಂಬಿದರು. ಸತ್ಯಶೋಧನೆ ಬಳಿಕ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಎಂಎಲ್‌ಸಿ ಭಾರತಿ ಶೆಟ್ಟಿ, ಗಲಭೆಯ ವೇಳೆ ಮಹಿಳೆಯರ ಅಂಗಾಂಗ ಮುಟ್ಟಿ ದೌರ್ಜನ್ಯ ಎಸಗಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
News Hour: ರಾಗಿಗುಡ್ದದಲ್ಲಿ ಈಗ ರಾಜಕೀಯ ಕೆಸರು, ಮತಾಂಧನಿಗೆ ಲಾಠಿ ರುಚಿ ಕೊಟ್ಟ ಪೊಲೀಸರು!
ಗಲಭೆಗೆ ನೇರವಾಗಿ ಬಿಜೆಪಿಯೇ ಕಾರಣ ಎಂದು ದೂರಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಹೇಳಿಕೆಯನ್ನೇ ಗುರುವಾರ ಸರ್ಕಾರದ ಇನ್ನಿಬ್ಬರು ಸಚಿವರಾದ ಚೆಲುವರಾಯಸ್ವಾಮಿ ಹಾಗೂ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಿಜೆಪಿಯವರು ಗಲಭೆ ಆಗಲಿ ಅನ್ನೋದನ್ನೇ ಕಾಯ್ತಾ ಇರ್ತಾರೆ ಎಂದು ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.