News Hour: ರಾಗಿಗುಡ್ದದಲ್ಲಿ ಈಗ ರಾಜಕೀಯ ಕೆಸರು, ಮತಾಂಧನಿಗೆ ಲಾಠಿ ರುಚಿ ಕೊಟ್ಟ ಪೊಲೀಸರು!

ರಾಗಿಗುಡ್ಡ ಗಲಭೆ ಪ್ರಕರಣದಲ್ಲಿ ರಾಜಕೀಯ ಕೆಸರೆರಚಾಟ ಆರಂಭವಾಗಿದೆ. ಸರ್ಕಾರದ ಮಂತ್ರಿಗಳು ಗಲಭೆಪೀಡಿತ ಜನರಿಗೆ ಸಾಂತ್ವನ ಹೇಳುವ ಬದಲು ರಾಜಕೀಯದ ಹೇಳಿಕೆ ನೀಡುವುದರಲ್ಲಿ ನಿರತರಾಗಿದ್ದರೆ, ಬಿಜೆಪಿಯ ನಾಯಕರು ಮತ್ತಷ್ಟು ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ.
 

First Published Oct 4, 2023, 11:42 PM IST | Last Updated Oct 4, 2023, 11:42 PM IST

ಬೆಂಗಳೂರು (ಅ.4): ಮುಸ್ಲೀಮರ ಪುಂಡಾಟದ ನಂತರ ಶಿವಮೊಗ್ಗ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ರಾಗುಗುಡ್ಡ ಗಲಭೆ ವಿಚಾರದಲ್ಲಿ ರಾಜಕೀಯ ಕೆಸರೆರಚಾಟ ಮುಂದುವರಿದಿದೆ. ಇದರ ನಡುವೆ ನಾವು ಸಾಬ್ರು ಗೊತ್ತಲ್ಲ ಎಂದು ಪೊಲೀಸರಿಗೆ ಧಮ್ಕಿ ಹಾಕಿದ ಕಲೀಂ ಎನ್ನುವ ವ್ಯಕ್ತಿಗೆ ಬೆನ್ನಿನ ಮೇಲೆ ಬಾಸುಂಡೆ ಬರುವಂತೆ ಲಾಠಿಯಲ್ಲಿ ಬಾರಿಸಿ ಸ್ಟೇಷನ್‌ಗೆ ಎಳೆದು ತಂದಿದ್ದಾರೆ.

ಇದರ ನಡುವೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ಕಾರ್ಯಕರ್ತರೇ ವೇಷ ಬದಲಿಸಿ ರಾಗಿಗುಡ್ಡದಲ್ಲಿ ಗಲಭೆ ಸೃಷ್ಟಿ ಮಾಡಿರಬಹುದು ಎಂದ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನೀಡಿದ್ದ ಹೇಳಿಕೆಗೆ ಮಂಗಳೂರಿನಲ್ಲಿ ಅವರು ಉಲ್ಟಾ ಹೊಡೆದಿದ್ದಾರೆ. ಇದರ ನಡುವೆ ಕಲ್ಲು ಹೊಡೆಯುವ ಸಂಸ್ಕೃತಿ ನಮ್ಮದಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.

News Hour: ಹಿಂದುಗಳ ಕಣ್ಣೀರಿನ ಮೇಲೆ ಮತ್ತೆ ಮುಸ್ಲಿಂ ಓಲೈಕೆಗೆ ಮುಂದಾಯ್ತಾ ಕಾಂಗ್ರೆಸ್‌ ಸರ್ಕಾರ?

ಇನ್ನು ನಾಳೆ ಶಿವಮೊಗ್ಗದ ರಾಗಿಗುಡ್ಡಕ್ಕೆ ಬಿಜೆಪಿ ನಿಯೋಗ ಭೇಟಿ ನೀಡಲಿದೆ. ಉಳ್ಳಾಗಡ್ಡಿ ಕಟ್ ಮಾಡಲೂ ಚಾಕು, ಚೂರಿ ಇಟ್ಟಿಲ್ಲ,  ಧರ್ಮ ಉಳಿಸಲೂ ಶಿವಾಜಿ ಆಗ್ತೀವಿ ಎಂದು ಕೇಸರಿ ಪಡೆ ಕೆರಳಿದೆ.