News Hour: ಹಿಂದುಗಳ ಕಣ್ಣೀರಿನ ಮೇಲೆ ಮತ್ತೆ ಮುಸ್ಲಿಂ ಓಲೈಕೆಗೆ ಮುಂದಾಯ್ತಾ ಕಾಂಗ್ರೆಸ್‌ ಸರ್ಕಾರ?

ಒಂದೆಡೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಹಿಂದುಗಳು ಒಡೆದು ಹೋದ ತಮ್ಮ ಮನೆಗಳನ್ನು ನೋಡಿಕೊಂಡು ಕಣ್ಣೀರಿಡುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್‌ ಸರ್ಕಾರ ಹಳೇ ಹುಬ್ಬಳ್ಳಿ ಕೋಮುಗಲಭೆ ಕೇಸ್‌ ಕೈಬಿಡುವ ಪ್ರಯತ್ನ ಮಾಡುವ ಮೂಲಕ ಮುಸ್ಲಿಂ ಓಲೈಕೆಗೆ ಮುಂದಾಗುತ್ತಿದೆ.

First Published Oct 3, 2023, 11:49 PM IST | Last Updated Oct 3, 2023, 11:49 PM IST

ಬೆಂಗಳೂರು (ಅ.3): ಶಿವಮೊಗ್ಗದ ರಾಗಿಗುಡ್ಡದಲ್ಲಿ ಮತಾಂಧರು ಹಿಂದುಗಳ ಮನೆಗಳನ್ನು ಪುಡಿಪುಡಿ ಮಾಡಿದ್ದಾರೆ. ಕಷ್ಟಪಟ್ಟು ಮನೆಗಳನ್ನು ಕಟ್ಟಿಕೊಂಡಿದ್ದ ಹಿಂದುಗಳು ಒಡೆದು ಹೋದ ಮನೆಯ ಕಿಟಕಿ ಗ್ಲಾಸ್‌ಗಳನ್ನು ನೋಡುತ್ತಾ ಮುಂದಿನ ಭವಿಷ್ಯವೇನು ಅನ್ನೋ ಯೋಚನೆಯಲ್ಲಿದ್ದರೆ, ಕಾಂಗ್ರೆಸ್‌ ಸರ್ಕಾರ ಲೋಕಸಭೆ ಚುನಾವಣೆಗೆ ಮುಸ್ಲಿಂ ಓಲೈಕೆಗೆ ಮುಂದಾಗಿದೆ

ಲೋಕಸಭೆ ಚುನಾವಣೆಗೆ ಮುಸ್ಲಿಂ ಓಲೈಕೆಗೆ ನಿಂತಿರುವ ಕಾಂಗ್ರೆಸ್‌ ಸರ್ಕಾರದ ಪರವಾಗಿ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್‌ ಅವರೇ ಪತ್ರ ಬರೆದಿದ್ದಾರೆ. ಡಿಜೆಗಳ್ಳಿ ಕೆಜಿ ಹಳ್ಳಿ ಕೇಸ್‌ಗೆ ತನ್ವೀರ್‌ ಸೇಠ್‌ ಬರೆದಿರುವ ಪತ್ರದ ರೀತಿಯಲ್ಲಿಯೇ ಹಳೇ ಹುಬ್ಬಳ್ಳಿ ಕೇಸ್‌ಗೆ ಡಿಕೆಶಿ ಪತ್ರ ಬರೆದ್ದಾರೆ.

ಮಲೆನಾಡನ್ನು ಮಸಣ ಮಾಡಲು ಹೊರಟ್ರು 'ಕಲ್ಲು' ಕೋಮು, 'ಇದೇನ್‌ ಹೊಸದಾ' ಅಂದ್ರಲ್ಲ ನಮ್ಮ ಹೋಮ್‌ ಮಿನಿಸ್ಟ್ರು!

ಅದರೊಂದಿಗೆ ಗಲಭೆಕೋರರ ವಿರುದ್ಧದ ಕೇಸ್ ಕೈಬಿಡಲು ಗೃಹ ಇಲಾಖೆ ಸಿದ್ಧತೆ ನಡೆಸಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಡಿಸಿಎಂ, ಶಾಸಕರ ಪತ್ರಕ್ಕೆ ಸ್ಪಂದನೆ ನೆಪದಲ್ಲಿ ಕೇಸ್ ಕ್ಲೋಸ್ ಮಾಡಲು ಯತ್ನ ನಡೆಸಲಾಗುತ್ತಿದೆ. ಆಯುಕ್ತರು, ಎಸ್ಪಿಗಳಿಗೆ ಪತ್ರ ಬರೆದು ಈ ಬಗ್ಗೆ ಎಡಿಜಿಪಿ ಮಾಹಿತಿ ಪಡೆದುಕೊಂಡಿದ್ದಾರೆ. ಸೆ.30ರೊಳಗೆ ಪೂರ್ಣ ವಿವರಗಳ ನೀಡುವಂತೆ ಡಿಜಿ-ಐಜಿ ಸೂಚನೆ ನೀಡಿದ್ದರು ಎನ್ನುವುದು ಬಯಲಾಗಿದೆ.