
ದೆವ್ವದ ಜೀತ..! ಮೌಢ್ಯದ ಹೆಸರಿನಲ್ಲಿ ಮಕ್ಕಳೇ ಜೀತದಾಳುಗಳು!
ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯ ಶ್ರೀ ಶನೇಶ್ವರ ಸ್ವಾಮಿ ಕ್ಷೇತ್ರದ ಅರ್ಚಕ ಹಾಗೂ ಶನೇಶ್ವರ ಟ್ರಸ್ಟ್ ನ ಮುಖ್ಯಸ್ಥ ಹನುಮಂತಪ್ಪ. ಇವನ ವೇಷಭೂಷಣ ನೋಡಿದ್ರೆ ಇವನೊಬ್ಬ ಬಿಲ್ಡಪ್ ರಾಜಾ ಅನ್ನೋದು ಗೊತ್ತಾಗುತ್ತೆ. ಇವನ ವಿಷಯವನ್ನು ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ಶಿವಮೊಗ್ಗ (ಏ.23): ರಾಜ್ಯದಲ್ಲಿ ಇಂಥವರು ಅನೇಕರಿದ್ದಾರೆ. ಅವರ ಪಾಡಿಗೆ ಅವರು ಬೇಕಾದನ್ನು ಮಾಡಿಕೊಂಡು ಸುಮ್ಮನಿರ್ತಾರೆ. ಆದ್ರೆ ಈತ ತುಂಬಾನೆ ಡಿಫರೆಂಟು. ಇಲ್ಲಿನ ಈ ಹನುಮಂತಪ್ಪನಿಗೆ (Hanumantappa) ಶನಿವಾರದಂದು ಶನೇಶ್ವರ, ಸೋಮವಾರದಂದು ಆಂಜನೇಯ ಸ್ವಾಮಿ ಮೈಮೇಲೆ ಬರುತ್ತಾರಂತೆ.
ದೇವರು ಮೈಮೇಲೆ ಬಂದಾಗ ಹುಚ್ಚರಂತೆ ಕುಣಿದು ಸುತ್ತಮುಲತ್ತಲಿನವರನ್ನು ದಿಗ್ಭ್ರಾಂತರನ್ನಾಗಿ ಮಾಡುತ್ತಾರೆ. ಇದೇ ಟೈಮ್ ನಲ್ಲಿ ಹನುಮಂತಪ್ಪನ ಮನಸ್ಸಿನಲ್ಲಿ ವಿಕೃತ ಮನಸ್ಸು ಜಾಗೃತವಾಗುತ್ತದೆಯಂತೆ. ಜ್ವರ, ಶೀತ, ತಲೆನೋವು ಅದೆಂತದೇ ಇರಲಿ ಈತ ಕ್ಷಣಮಾತ್ರಕ್ಕೆ ವಾಸಿ ಮಾಡ್ತಾನೆ. ಯಾರೇ ದೇವಸ್ಥಾನಕ್ಕೆ ಬರಲಿ ದೇವರ ದರ್ಶನಕ್ಕೂ ಮುನ್ನ ಈತನ ದರ್ಶನ ಆಗ್ಬೇಕಂತೆ. ಹೀಗಾಗಿ ಈತನ ಬಳಿ ಬರುವವರಿಗೆ ದೆವ್ವ ಹಿಡಿದಿದೆ ಎಂದು ಹೇಳುತ್ತಾನೆ.
ಮೌಢ್ಯ ಮೇಲೆ ಬ್ರಹ್ಮಾಸ್ತ್ರ; ಯಾವುದು ಮೌಢ್ಯ? ಯಾವುದು ಮೌಢ್ಯ ಅಲ್ಲ
ಶಿವಮೊಗ್ಗ (Shivamogga) ಜಿಲ್ಲೆಯ ಹಾರನಹಳ್ಳಿಯ (Haranahalli) ಶ್ರೀ ಶನೇಶ್ವರ ಸ್ವಾಮಿ (Shaneshwara Swamy Temple) ಕ್ಷೇತ್ರದ ಅರ್ಚಕ ಹಾಗೂ ಶನೇಶ್ವರ ಟ್ರಸ್ಟ್ ನ ಮುಖ್ಯಸ್ಥ ಹನುಮಂತಪ್ಪ. ಇವನ ವೇಷಭೂಷಣ ನೋಡಿದ್ರೆ ಇವನೊಬ್ಬ ಬಿಲ್ಡಪ್ ರಾಜಾ ಅನ್ನೋದು ಗೊತ್ತಾಗುತ್ತೆ. ಇವನ ವಿಷಯವನ್ನು ಕವರ್ ಸ್ಟೋರಿ ತಂಡ ಎಳೆಎಳೆಯಾಗಿ ಬಿಚ್ಚಿಟ್ಟಿದೆ.