ಹರ್ಷ ಕೊಲೆ ಪ್ರಕರಣ, ಪೊಲೀಸ್ ವಶಕ್ಕೆ ಪಡೆದ ಆರೋಪಿಗಳು ಯಾರು? ಕೊಲೆ ಉದ್ದೇಶವೇನು?ಸ್ಫೋಟಕ ಮಾಹಿತಿ ಬಹಿರಂಗ!

ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ರೂವಾರಿಗಳಾದ ನಾಲ್ವರನ್ನು ಬಂಧಿಸಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇತ್ತ ಕೆಎಸ್ ಈಶ್ವರಪ್ಪ ಹೇಳಿದ ಮುಸ್ಲಿಂ ಗೂಂಡಾಗಿರಿ ಮಾತಿಗೆ ತೀವ್ರ ವಿರೋಧಗಳು ವ್ಯಕ್ತವಾಗಿದೆ. ಆದರೆ ಆರೋಪಿಗಳ ಹೆಸರು ಬಹಿರಂಗವಾಗುತ್ತಿದ್ದಂತೆ ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ನಡುವೆ ಬಂಧಿತರ ಮಾಹಿತಿ, ಕೊಲೆ ಉದ್ದೇಶ ಕುರಿತು ರಾಜಕೀಯ ನಾಯಕ ವಾಕ್ಸಮರ ಜಟಾಪಟಿ ಜೋರಾಗಿದೆ. ಹರ್ಷಾ ಕೊಲೆ ಪ್ರಕರಣ ಬಳಿಕ ನಡೆದ ಬೆಳವಣಿಗೆ ಹಾಗೂ ರಾಜಕೀಯ ನಾಯಕರು ವರಸೆ ಇಲ್ಲಿದೆ.
 
First Published Feb 22, 2022, 10:10 PM IST | Last Updated Feb 22, 2022, 10:10 PM IST

ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷಾ ಕೊಲೆ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. 11 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆ ರೂವಾರಿಗಳಾದ ನಾಲ್ವರನ್ನು ಬಂಧಿಸಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇತ್ತ ಕೆಎಸ್ ಈಶ್ವರಪ್ಪ ಹೇಳಿದ ಮುಸ್ಲಿಂ ಗೂಂಡಾಗಿರಿ ಮಾತಿಗೆ ತೀವ್ರ ವಿರೋಧಗಳು ವ್ಯಕ್ತವಾಗಿದೆ. ಆದರೆ ಆರೋಪಿಗಳ ಹೆಸರು ಬಹಿರಂಗವಾಗುತ್ತಿದ್ದಂತೆ ಈಶ್ವರಪ್ಪ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದರ ನಡುವೆ ಬಂಧಿತರ ಮಾಹಿತಿ, ಕೊಲೆ ಉದ್ದೇಶ ಕುರಿತು ರಾಜಕೀಯ ನಾಯಕ ವಾಕ್ಸಮರ ಜಟಾಪಟಿ ಜೋರಾಗಿದೆ. ಹರ್ಷಾ ಕೊಲೆ ಪ್ರಕರಣ ಬಳಿಕ ನಡೆದ ಬೆಳವಣಿಗೆ ಹಾಗೂ ರಾಜಕೀಯ ನಾಯಕರು ವರಸೆ ಇಲ್ಲಿದೆ.
 
Video Top Stories