ರೋಹಿಣಿ ರಂಪಾಯಣ: ರಾಜೀನಾಮೆ ನಿರ್ಧಾರದ ಬಗ್ಗೆ ಶಿಲ್ಪಾನಾಗ್ ಸ್ಪಷ್ಟನೆ

- ರೋಹಿಣಿ ಸಿಂಧೂರಿಯಿಂದ ದಬ್ಬಾಳಿಕೆ, ಕಿರುಕುಳ ಆರೋಪ

- ನಿಮ್ಮ ಜೊತೆ ನಾವಿದ್ದೇವೆ, ಶಿಲ್ಪಾಗೆ ಭಾರೀ ಬೆಂಬಲ

- ರಾಜೀನಾಮೆ ವಿಚಾರಕ್ಕೆ ಸ್ಪಷ್ಟನೆ 

First Published Jun 4, 2021, 3:32 PM IST | Last Updated Jun 4, 2021, 3:32 PM IST

ಮೈಸೂರು (ಜೂ. 04): ಕೊರೋನಾ ನಿಯಂತ್ರಣ ವಿಚಾರದಲ್ಲಿ ಡೀಸಿ ರೋಹಿಣಿ ಸಿಂಧೂರಿ, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವಿನ ಜಟಾಪಟಿ ಬಹಳ ಚರ್ಚೆಯಾಗುತ್ತಿದೆ. ಈ ಚರ್ಚೆಯ ಬಗ್ಗೆ ಶಿಲ್ಪಾನಾಗ್ ರೋಹಿಣಿ ಸಿಂಧೂರಿ ಹೆಸರನ್ನು ಪ್ರಸ್ತಾಪಿಸದೇ ಪ್ರತಿಕ್ರಿಯಿಸಿದ್ದಾರೆ. 

ರೋಹಿಣಿ ಸಿಂಧೂರಿ VS ಶಿಲ್ಪಾನಾಗ್: ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಡೀಸಿ

'ಬಹಳ ಬೇಸರದಿಂದ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೇನೆ ಹೊರತು, ದುಡುಕಿನಿಂದ ರಾಜಿನಾಮೆಗೆ ಮುಂದಾಗಿಲ್ಲ. ವಾರ್‌ರೂಂನಲ್ಲಿ ಲೋಪದೋಷಗಳಿತ್ತು. ಈ ಬಗ್ಗೆ ಗಮನಕ್ಕೆ ತಂದರೂ ಡೀಸಿ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.