ರಾಜ್ಯಕ್ಕೆ ಕೇಂದ್ರದಿಂದ ನಯಾಪೈಸೆ ಸಿಕ್ಕಿಲ್ರೀ, ಮೋದಿ ತಾರತಮ್ಯ ನೀತಿ ಮಾಡ್ತಿದ್ದಾರೆ: ಸಿದ್ದು

-  ಹಳ್ಳಿಗಳಲ್ಲೂ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಸಿದ್ದರಾಮಯ್ಯ ಕಳವಳ 

- ಸೋಂಕು ಹೆಚ್ಚಳಕ್ಕೆ ಸರ್ಕಾರದ ಉದಾಸೀನತೆಯೇ ಕಾರಣ: ಸಿದ್ದರಾಮಯ್ಯ

- ಗುಜರಾತ್‌ಗೆ 1 ಸಾವಿರ ಕೋಟಿ ರೂ ಪ್ಯಾಕೇಜ್ , ರಾಜ್ಯಕ್ಕೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ

First Published May 21, 2021, 5:03 PM IST | Last Updated May 21, 2021, 5:08 PM IST

ಬೆಂಗಳೂರು (ಮೇ. 21): 'ಪ್ರಧಾನಿ ಮೋದಿ ರಾಜ್ಯಕ್ಕೆ ತಾರತಮ್ಯ ಮಾಡುತ್ತಿದ್ದಾರೆ. ಗುಜರಾತ್‌ಗೆ 1 ಸಾವಿರ ಕೋಟಿ ರೂ ಪ್ಯಾಕೇಜ್ ಘೋಷಿಸಿದ್ದಾರೆ. ಆದರೆ ರಾಜ್ಯಕ್ಕೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಸರ್ಕಾರ ಸುಳ್ಳು ಹೇಳುವ ಕೆಲಸ ಮಾಡ್ತಿದೆ' ಎಂದು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

40 ಸಾವಿರ ಮಕ್ಕಳಿಗೆ ಸೋಂಕು, 2 ನೇ ಅಲೆಯೇ ಮಕ್ಕಳಿಗೆ ಡೇಂಜರಸ್

ಇನ್ನು ಹಳ್ಳಿಗಳಲ್ಲೂ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳಕ್ಕೆ ಸರ್ಕಾರದ ಉದಾಸೀನತೆಯೇ ಕಾರಣ. ಸೋಂಕಿತರು, ಮೃತರ ಸಂಖ್ಯೆಯಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದಾರೆ.