
News Hour: ರನ್ಯಾ ರಾವ್ ಚಿನ್ನದ ಹಿಂದೆ ಪ್ರಭಾವಿ ಪಾತ್ರ, ಕೋರ್ಟ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಹೇಳಿದ್ದೇನು?
ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದು, ಆಕೆಯ ಹಿಂದೆ ಪ್ರಭಾವಿಗಳ ಪಾತ್ರವಿರುವ ಶಂಕೆ ವ್ಯಕ್ತವಾಗಿದೆ. ಒಂದು ಕೆಜಿ ಚಿನ್ನಕ್ಕೆ 1 ಲಕ್ಷ ಕಮಿಷನ್ ಪಡೆಯುತ್ತಿದ್ದ ರನ್ಯಾ, ಈ ಬಾರಿ 14 ಲಕ್ಷ ಪಡೆಯಬೇಕಿತ್ತು. ಆಕೆಯ ದುಬೈ ಪ್ರವಾಸದ ಖರ್ಚನ್ನೂ ಅವರೇ ನೋಡಿಕೊಳ್ಳುತ್ತಿದ್ದರು.
ಬೆಂಗಳೂರು (ಮಾ.6): ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಹಿಂದೆ ಪ್ರಭಾವಿಗಳ ಪಾತ್ರವಿರುವ ಸಂಶಯ ವ್ಯಕ್ತವಾಗಿದೆ. ಅದರೊಂದಿಗೆ ಬಗೆದಷ್ಟು ರನ್ಯಾ ರಾವ್ ಚಿನ್ನದ ಬೇಟೆಯ ಒಂದೊಂದು ಕಥೆಗಳು ಬಯಲಾಗುತ್ತಿವೆ.
ಒಂದು ಕೆಜಿ ಚಿನ್ನವನ್ನು ತಂದುಕೊಟ್ಟರೆ ರನ್ಯಾ ರಾವ್‌ಗೆ ಕಮೀಷನ್ ಆಗಿ ಸಿಗುತ್ತಿದ್ದದ್ದು 1 ಲಕ್ಷ ರೂಪಾಯಿ. ಇದಕ್ಕಾಗಿಯೇ ಆಕೆ ಗೋಲ್ಡ್ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದರಾ ಎನ್ನುವ ಅನುಮಾನಗಳು ಬಂದಿವೆ. ರನ್ಯಾ ರಾವ್‌ಗೆ ಈ ಬಾರಿಯ ಚಿನ್ನದ ಕಳ್ಳ ಸಾಗಣೆಗೆ 14 ಲಕ್ಷ ರೂಪಾಯಿ ಸಿಗಬೇಕಿತ್ತು. ಆಕೆಯ ದುಬೈ ಟ್ರಿಪ್‌ಗೂ ಯಾವುದೇ ಖರ್ಚಾಗುತ್ತಿರಲಿಲ್ಲ. ಇದರ ನಡುವೆ ಆಕೆಯ ಹಿಂದೆ ಇರುವ ವ್ಯಕ್ತಿಗಳು ಯಾರು ಅನ್ನೋದರ ಕುತೂಹಲ ಶುರುವಾಗಿದೆ.
ಯಾರು ಗೊತ್ತಾ ಚಿನ್ನದ ಕಳ್ಳಿ ರನ್ಯಾ ರಾವ್ ಪತಿ? ಬೆಂಗಳೂರಿನ ಈ ಪ್ರಸಿದ್ದ ಬಾರ್ ಡಿಸೈನ್ ಮಾಡಿದ್ದು ಇವರೇ..
ರನ್ಯಾ ರಾವ್‌ಗೆ ಜಾಮೀನು ಅರ್ಜಿ ಕೂಡ ಕೋರ್ಟ್‌ಗೆ ಬಂದಿದ್ದು, ಈ ವೇಳೆ ಡಿಆರ್‌ಐ ಅಧಿಕಾರಿಗಳು ಮಾಡಿರುವ ವಾದವನ್ನು ನೋಡಿದರೆ, ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.