ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಆಕೆಯ ಪತಿ ಜತಿನ್ ಹುಕ್ಕೇರಿ ಅವರ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ರನ್ಯಾ ದುಬೈಗೆ ಹಲವು ಬಾರಿ ಪ್ರಯಾಣ ಬೆಳೆಸಿದ್ದು, ಆಕೆಯ ಮನೆಯಿಂದ ಕೋಟ್ಯಂತರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು (ಮಾ.6): ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ನಡುವೆ ಅವರಿಗೆ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದು, ಅವರ ಪತಿ ಪ್ರಸಿದ್ಧ ಆರ್ಕಿಟೆಕ್ಚರ್‌ಗಳಲ್ಲಿ ಒಬ್ಬರು ಎನ್ನುವುದು ಗೊತ್ತಾಗಿತ್ತು. ಬೆಂಗಳೂರಿನ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ತಾಜ್ ವೆಸ್ಟ್ ಎಂಡ್‌ನಲ್ಲಿ ಅವರ ವಿವಾಹ ನಡೆದಿತ್ತಾದರೂ ಇದರ ಮಾಹಿತಿ ಎಲ್ಲೂ ಹೊರಬಿದ್ದಿರಲಿಲ್ಲ. ರನ್ಯಾ ರಾವ್ ಬಂಧನವಾದಾಗಲೂ ಅವರ ಪತಿ ಯಾರು ಅನ್ನೋದು ಎಲ್ಲರ ಕುತೂಹಲವಾಗಿತ್ತು. ಈಗ ರನ್ಯಾ ರಾವ್ ಅವರ ಪತಿ ಯಾರು ಎನ್ನುವ ಮಾಹಿತಿ ಸಿಕ್ಕಿದೆ.
ರನ್ಯಾ ರಾವ್ ಅವರ ಪತಿಯ ಹೆಸರು ಜತಿನ್ ಹುಕ್ಕೇರಿ. ಬೆಂಗಳೂರಿನ ಪ್ರಸಿದ್ಧ ಆರ್ಕಿಟೆಕ್ಚರ್‌ಗಳಲ್ಲಿ ಒಬ್ಬರು. ಈಗ ರನ್ಯಾ ರಾವ್ ಬಂಧನ ಬೆನ್ನಲ್ಲಿಯೇ ಜತಿನ್ ಹುಕ್ಕೇರಿ ಅವರ ಮೇಲೂ ಡೈರಕ್ಟರೇಟ್ ಆಫ್ ರೆವೆನ್ಯೂ ಇಂಟಲಿಜೆನ್ಸ್ (ಡಿಆರ್‌ಐ ) ಅನುಮಾನ ವ್ಯಕ್ತಪಡಿಸಿದೆ. ಜತಿನ್ ಹುಕ್ಕೇರಿ ಇತ್ತೀಚೆಗೆ ನಡೆಸಿದ ದುಬೈ ಟ್ರಿಪ್‌ಗಳ ವಿವರಗಳನ್ನು ಪತ್ತೆ ಮಾಡಲು ಮುಂದಾಗಿದೆ. ರನ್ಯಾ ಸ್ವತಃ ಎರಡು ವಾರಗಳಲ್ಲಿ ನಾಲ್ಕು ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಕಂಡುಬಂದಿದೆ. ಕಳೆದ ವರ್ಷದಲ್ಲಿ, ಅವರು 30 ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಆಕೆಯ ಬೆಲ್ಟ್‌ನಲ್ಲಿ 12.56 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.. ರನ್ಯಾ ಅವರ ಮನೆಯಿಂದ ಡಿಆರ್‌ಐ 17.29 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ಇದರಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ನಗದು ಸೇರಿದೆ. ಕಳ್ಳಸಾಗಣೆ ಮಾಡಿದ ಪ್ರತಿ ಕೆಜಿ ಚಿನ್ನಕ್ಕೆ ಆಕೆಗೆ 1 ಲಕ್ಷ ರೂ.ಗಳಂತೆ ಪಾವತಿಸಲಾಗಿದ್ದು, ಪ್ರತಿ ಟ್ರಿಪ್‌ಗೆ 12 ರಿಂದ 13 ಲಕ್ಷ ರೂ.ಗಳನ್ನು ಗಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಯಾರಿವರು ಜತಿನ್ ಹುಕ್ಕೇರಿ: ಜತಿನ್ ಹುಕ್ಕೇರಿ ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಆರ್ಕಿಟೆಕ್ಚರ್ ಮತ್ತು ಇಂಟೀರಿಯರ್ ಡಿಸೈನ್‌ನಲ್ಲಿ ಬಿ ಆರ್ಚ್ ಪೂರ್ಣಗೊಳಿಸಿದ್ದಾರೆ. ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್ - ಎಕ್ಸಿಕ್ಯುಟಿವ್ ಎಜುಕೇಶನ್‌ನಿಂದ ಡಿಸ್ರಪ್ಟಿವ್ ಮಾರ್ಕೆಟ್ ಇನ್ನೋವೇಶನ್‌ನಲ್ಲಿ ಪರಿಣಿತಿ ಪಡೆದುಕೊಂಡಿದ್ದಾರೆ.
ಹುಕ್ಕೇರಿಯ ಪ್ರಮುಖ ಬೆಂಗಳೂರಿನ ಪ್ರಾಜೆಕ್ಟ್ ಎಂದರೆ ಹ್ಯಾಂಗೊವರ್, ಆಲಿವ್ ಬೀಚ್, ಬ್ರೂಮಿಲ್ ಮತ್ತು ಬೆಂಗಳೂರು XOOX ನಂತಹ ಬಾರ್‌ಗಳು, ಡೈನರ್‌ಗಳು ಮತ್ತು ರೆಸ್ಟೋರೆಂಟ್‌ಗಳು. ಮುಂಬೈನಲ್ಲಿ ಗೇಟ್‌ವೇ ಟ್ಯಾಪ್‌ರೂಮ್ ಮತ್ತು ದೆಹಲಿಯಲ್ಲಿ ಮಂಕಿ ಬಾರ್ ಸಹ ಅವರ ಕ್ಲೈಂಟ್ ಪೋರ್ಟ್‌ಫೋಲಿಯೊದ ಭಾಗವಾಗಿದೆ. ಹುಕ್ಕೇರಿ ಅವರು ಕ್ರಾಫ್ಟ್ ಕೋಡ್‌ನ ಸ್ಥಾಪಕರು ಹಾಗೂ WDA & DECODE LLC ಯ ಸ್ಥಾಪಕರು ಮತ್ತು ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದಾರೆ.ರನ್ಯಾ ಮತ್ತು ಹುಕ್ಕೇರಿ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದರು.

'ನಮ್ಮ ತಲೆ ತಗ್ಗಿಸುವ ಕೆಲಸ ಮಾಡಿದ್ದಾಳೆ..' ರನ್ಯಾ ರಾವ್ ಕೇಸ್‌ನಿಂದ ಅಂತರ ಕಾಯ್ದುಕೊಂಡ ಕರ್ನಾಟಕ ಡಿಜಿಪಿ!
ರನ್ಯಾ ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರ ಮಲಮಗಳು. ಅವರು ಪ್ರಸ್ತುತ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ರನ್ಯಾ ತನ್ನ ಪತಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಅವರು ಪ್ರಕರಣದಿಂದ ದೂರ ಉಳಿದಿದ್ದಾರೆ. 2014 ರಲ್ಲಿ ಮೈಸೂರಿನ ಯೆಲ್ವಾಲ್‌ನಲ್ಲಿ ಕೇರಳಕ್ಕೆ ಹೋಗುತ್ತಿದ್ದ ಬಸ್‌ನಿಂದ 2.07 ಕೋಟಿ ರೂ. ಕಳ್ಳತನದಲ್ಲಿಇದೇ ಐಪಿಎಸ್ ಅಧಿಕಾರಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಈ ಘಟನೆಯ ನಂತರ ರಾವ್ ಅವರನ್ನು ದಕ್ಷಿಣ ವಲಯದ ಐಜಿಪಿ ಹುದ್ದೆಯಿಂದ ತೆಗೆದು ಹಾಕಲಾದರೆ, ಈ ಅಪರಾಧಕ್ಕಾಗಿ ಅವರ ಗನ್‌ಮ್ಯಾನ್‌ಅನ್ನು ಬಂಧಿಸಲಾಗಿತ್ತು.
ಜೈಲುಪಾಲಾದ ಡಿಜಿಪಿ ಮಲ ಮಗಳು ನಟಿ ರನ್ಯಾಗೂ ಚಿಕ್ಕಮಗಳೂರಿಗೂ ನಂಟೇನು? ಚಿನ್ನ ಎಲ್ಲಿಟ್ಟಿದ್ದಳು ಗೊತ್ತಾ?
