Asianet Suvarna News Asianet Suvarna News

ವರದಿಗಾರನ ಪ್ರಶ್ನೆಗೆ 'ಏಯ್ ನಡಿಯೋ ಆಚೆ..' ಎಂದ ನಾಸಿರ್‌ ಹುಸೇನ್‌!

ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆಯನ್ನು ಕೂಗಿರುವ ವಿಚಾರದಲ್ಲಿ ವರದಿಗಾರರ ಪ್ರಶ್ನೆಗೆ ಸ್ವತಃ ನಾಸಿರ್‌ ಹುಸೇನ್‌ ಗರಂ ಆಗಿರುವ ಘಟನೆ ನಡೆದಿದೆ.
 

ಬೆಂಗಳೂರು (ಫೆ.27): ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆ ಕೂಗಿರುವುದು ರಾಜಕೀಯ ತಿರುವು ಪಡೆದುಕೊಂಡಿದೆ. ಇದರ ನಡುವೆ ರಾಜ್ಯಸಭಾ ಸಂಸದ ನಾಸಿರ್‌ ಹುಸೇನ್‌ ಈ ಬಗ್ಗೆ ಪತ್ರಕರ್ತರು ಕೇಳಿದ್ದ ಪ್ರಶ್ನೆಗೆ ದರ್ಪದಿಂದ ಉತ್ತರಿಸಿದ್ದಾರೆ.

ನಿಮ್ಮ ಬೆಂಬಲಿಗರು ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆಯನ್ನು ವಿಧಾನಸೌಧದಲ್ಲೇ ಕೂಗಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಅಂದಾಗ, 'ಏನ್‌ ನಡಿಯೋ ಆಚೆ..' ಎಂದು ವರದಿಗಾರನಿಗೆ ಹೇಳಿದ್ದಾರೆ. ಹುಚ್ಚರ ಥರ ಪ್ರಶ್ನೆ ಕೇಳಬೇಡ ಎಂದು ಅವರು ಹೇಳಿದ್ದಾರೆ.

Watch: ಇದೆಂಥಾ ಸಂಭ್ರಮ... ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ!

ಬಳಿಕ ಖಾಸಗಿ ಟಿವಿಗೆ ನೀಡಿದ ಹೇಳಿಕೆಯಲ್ಲಿ, ಈ ರೀತಿ ಕೂಗಿದ್ದು ನನಗೆ ಕೇಳಿಸಿಲ್ಲ. ಹಾಗೇನಾದರೂ ಹೇಳಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಹೇಳುವ ಮೂಲಕ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾರೆ.
 

Video Top Stories