ಕಲಬುರಗಿಯಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವು: ಭರ್ತಿ ಸನಿಹಕ್ಕೆ ಕಬಿನಿ ಜಲಾಶಯ

ಚಿಕ್ಕೊಡಿಯಲ್ಲಿ ನದಿ ದಡದಲ್ಲಿದ್ದ ದತ್ತ ಮಂದಿರ ಮುಳುಗಡೆ
ಹುಬ್ಬಳ್ಳಿಯಲ್ಲಿ ಬೈರಪ್ಪ ಜಲಪಾತಕ್ಕೆ ಬಂತು ಜೀವ ಕಳೆ..!
ವಿಜಯಪುರದಲ್ಲಿ ಅರ್ಧದಷ್ಟು ಭರ್ತಿಯಾದ ಆಲಮಟ್ಟಿ ಡ್ಯಾಂ..!

Share this Video
  • FB
  • Linkdin
  • Whatsapp

ಉತ್ತರ, ಮಧ್ಯ ಕರ್ನಾಟಕ ಮತ್ತು ಹಳೇ ಮೈಸೂರು(Mysore) ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ಬತ್ತಿ ಹೋಗಿದ್ದ ಜಲಾಶಯಗಳು ಭರ್ತಿಯಾಗುತ್ತಿದ್ದು, ಕೆರೆ ಕಟ್ಟೆಗಳು ತುಂಬಿವೆ. ಕಲಬುರಗಿಯಲ್ಲಿ(Kalaburagi) ಮಳೆಗೆ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಇನ್ನೂ ಬೆಳಗಾವಿಯಲ್ಲಿ(Belagavi) ಕುಸಿದ ರಸ್ತೆಯಲ್ಲಿ ಬೈಕ್‌ ಸವಾರನೊಬ್ಬ ಬಿದ್ದು, ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಧಾರವಾಡದಲ್ಲಿ(dharwad) ನಿರಂತರ ಮಳೆಗೆ(Rain) ಬೆಳೆಯೆಲ್ಲಾ ನೀರಿನಲ್ಲಿ ಮುಳುಗಿ ಹೋಗಿದೆ. ಬೆಳಗಾವಿಯಲ್ಲಿ ನದಿ ಬದಿಯಲ್ಲಿದ್ದ ದತ್ತ ಮಂದಿರ ಮುಳುಗಡೆಯಾಗಿದೆ. ಕೊಪ್ಪಳದ ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದೆ. ಇನ್ನೂ ಹುಬ್ಬಳ್ಳಿಯಲ್ಲಿ ಬೈರಪ್ಪ ಜಲಪಾತಕ್ಕೆ ಜೀವಕಳೆ ಬಂದಿದೆ. 

ಇದನ್ನೂ ವೀಕ್ಷಿಸಿ: ಉಕ್ಕಿ ಹರಿದ ನದಿಗಳು..ಕರುನಾಡಿಗೆ ಪ್ರಳಯದ ಭೀತಿ: ಇಂದು ಡಿಸಿಗಳ ಜೊತೆ ಸಿಎಂ ಸಭೆ

Related Video