Asianet Suvarna News Asianet Suvarna News

26 ಅನಾಥಾಶ್ರಮಗಳು, 16 ವೃದ್ಧಾಶ್ರಮ, 45 ಶಾಲೆಗಳನ್ನು ನಿರ್ವಹಿಸುತ್ತಿದ್ದರು ಅಪ್ಪು..!

Nov 10, 2021, 2:32 PM IST
  • facebook-logo
  • twitter-logo
  • whatsapp-logo

ಬೆಂಗಳೂರು (ನ. 10): ಪುನೀತ್‌ ರಾಜ್‌ಕುಮಾರ್‌ (Puneeth Rajkumar) ಬರೀ ತೆರೆ ಮೇಲಿನ ಹೀರೋ ಆಗಿರಲಿಲ್ಲ, ನಿಜ ಜೀವನದಲ್ಲೂ ಅದೆಷ್ಟೋ ಮಂದಿಯ ಪಾಲಿಗೆ ಹೀರೋ ಆಗಿದ್ದರು. ದಾನ-ಧರ್ಮ ಮಾಡುವುದರಲ್ಲಿ ಅಪ್ಪಾಜಿಯನ್ನೇ ಮೀರಿಸಿದ ಮಗ. ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದ ಹಾಗೆ ನೋಡಿಕೊಂಡ ದಾನಶೂರ ಕರ್ಣ.  ಅವರು ಬಡವರು ಮತ್ತು ಅಗತ್ಯವಿರುವವರ ನೆರವಿಗಾಗಿ ರಾಜ್ಯದಲ್ಲಿ 26 ಅನಾಥಾಶ್ರಮಗಳು, 16 ವೃದ್ಧಾಶ್ರಮ ಮತ್ತು 45 ಶಾಲೆಗಳನ್ನು ಸ್ಥಾಪಿಸಿ, ನಿರ್ವಹಿಸುತ್ತಿದ್ದರು. ಇದು ಅಪ್ಪು ಅವರ ಹೃದಯ ಶ್ರೀಮಂತಿಕೆಗೆ ಸಾಕ್ಷಿ. 

ಅಪ್ಪು ಅಭಿಮಾನಿಗಳಿಗೆ ಅನ್ನಸಂತರ್ಪಣೆ, ಭಾವುಕರಾದ ರಾಜ್ ಕುಟುಂಬ, ಮರುಗಿದ ಅಭಿಮಾನಿ ಸಮೂಹ