Asianet Suvarna News Asianet Suvarna News

PSI ನೇಮಕಾತಿ ಹಗರಣ: ಕಾಂಗ್ರೆಸ್‌ಗೂ, ಅಕ್ರಮಕ್ಕೂ ಏನ್ರಿ ಸಂಬಂಧ.? ಡಿಕೆ ಶಿವಕುಮಾರ್

ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರ, ಕಾಂಗ್ರೆಸ್‌ಗೂ, ಪಿಎಸ್‌ಐ ಅಕ್ರಮಕ್ಕೂ ಏನು ಸಂಬಂಧ..? ಈ ಹಗರಣವನ್ನು ಹೊರ ತಂದಿದ್ದೇ ಕಾಂಗ್ರೆಸ್. ಯಾರು ಏನು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು.  ರಾಜ್ಯ ಸರ್ಕಾರವು ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.
 

ಬೆಂಗಳೂರು (ಏ. 24): ರಾಜ್ಯದಲ್ಲಿ ಇರೋದು ಬಿಜೆಪಿ ಸರ್ಕಾರ, ಕಾಂಗ್ರೆಸ್‌ಗೂ, ಪಿಎಸ್‌ಐ ಅಕ್ರಮಕ್ಕೂ ಏನು ಸಂಬಂಧ..? ಈ ಹಗರಣವನ್ನು ಹೊರ ತಂದಿದ್ದೇ ಕಾಂಗ್ರೆಸ್. ಯಾರು ಏನು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಬೇಕು.  ರಾಜ್ಯ ಸರ್ಕಾರವು ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕಾಂಗ್ರೆಸ್‌ ಮುಖಂಡನ ಬಂಧನವಾಗಿದೆ ಎನ್ನುತ್ತಿದ್ದಾರೆ. ಈ ಪ್ರಕರಣವನ್ನು ಮೊದಲು ಬೆಳಕಿಗೆ ತಂದಿದ್ದೇ ನಾವು. ಪ್ರಕರಣದಲ್ಲಿ ಯಾರದ್ದೇ ಪಾತ್ರವಿದ್ದರೂ ಬಂಧಿಸಿ ಕ್ರಮ ಕೈಗೊಳ್ಳಲಿ ಎಂದಿದ್ದಾರೆ. ಈ ಹಗರಣ ನಡೆದ ಶಿಕ್ಷಣ ಸಂಸ್ಥೆ ಸಂಸ್ಥಾಪಕರು ಗೃಹ ಸಚಿವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಫೋಟೋಗಳು ಬಂದಿವೆ. ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದು, ಪರೀಕ್ಷೆ ಬರೆದ 52 ಸಾವಿರ ಅಭ್ಯರ್ಥಿಗಳಿಗೆ ಮೋಸ ಆಗಿದೆ. ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.