ಯೋಗ ಜೀವನದ ಭಾಗವಲ್ಲ, ಯೋಗವೇ ಜೀವನದ ದಾರಿ: ಪ್ರಧಾನಿ ಮೋದಿ
* ಸುಮಾರು 15,000 ಜನರೊಂದಿಗೆ ಯೋಗ ಮಾಡಿದ ಪ್ರಧಾನಿ ನರೇಂದ್ರ ಮೋದಿ
* ಯೋಗದ ಮಹತ್ವದ ಕುರಿತು ತಿಳಿಸಿದ ಪ್ರಧಾನಿ
* ನಿಮಿಷಗಳ ಧ್ಯಾನವು ನಮಗೆ ವಿಶ್ರಾಂತಿ ನೀಡುತ್ತದೆ
ಮೈಸೂರು(ಜೂ.21): ಆರೋಗ್ಯವಂತ ದೇಹಕ್ಕೆ ಯೋಗ ಅತೀ ಅಗತ್ಯವಾಗಿದೆ. ಇಂದು ಜಗತ್ತಿನ ಮೂಲೆ ಮೂಲೆಯಿಂದ ಯೋಗದ ಪ್ರತಿಧ್ವನಿ ಕೇಳಿ ಬರುತ್ತಿದೆ. ಇದು ಜೀವನದ ಆಧಾರವಾಯಿತು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ಎಷ್ಟೇ ಒತ್ತಡದ ವಾತಾವರಣದಲ್ಲಿದ್ದರೂ, ಕೆಲವು ನಿಮಿಷಗಳ ಧ್ಯಾನವು ನಮಗೆ ವಿಶ್ರಾಂತಿ ನೀಡುತ್ತದೆ, ನಮ್ಮ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಾವು ಯೋಗವನ್ನು ಹೆಚ್ಚುವರಿ ಕೆಲಸವಾಗಿ ತೆಗೆದುಕೊಳ್ಳಬೇಕಾಗಿಲ್ಲ. ನಮಗೂ ಯೋಗ ತಿಳಿಯಬೇಕು, ಯೋಗವನ್ನೂ ಬದುಕಬೇಕು. ಯೋಗವನ್ನು ಸಾಧಿಸಬೇಕು, ಯೋಗವನ್ನೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಚರಿತ್ರೆ ಹಾಗೂ ಚಾರಿತ್ರ್ಯ ಕಟ್ಟುವ ಕೆಲಸ: ವಿಶ್ವ ಯೋಗ ದಿನದಲ್ಲಿ ಸಿಎಂ ಬೊಮ್ಮಾಯಿ