Caste census: ಜಾತಿಗಣತಿ ವರದಿ ತಿರಸ್ಕರಿಸಿ ಯಾವ್ಯಾವ ಸಚಿವರ ಸಹಿ ? ವರದಿ ಸ್ವೀಕರಿಸಿ ಸಹಿ ಹಾಕಿದ ಸಚಿವರು ಯಾರು ?

ಕಾಂಗ್ರೆಸ್‌ನೊಳಗೆ ಭುಗಿಲೆದ್ದ ಜಾತಿ ಗಣತಿ ವರದಿ ಸಂಘರ್ಷ
ಸಿದ್ದರಾಮಯ್ಯ ಸಂಪುಟದಲ್ಲೇ ವರದಿ ಪರ-ವಿರೋಧ ಗುದ್ದಾಟ
ಜಾತಿ ಗಣತಿ ವಿಚಾರದಲ್ಲಿ ಸಿದ್ದರಾಮಯ್ಯ ಸಂಪುಟವೇ ಇಬ್ಭಾಗ

Share this Video
  • FB
  • Linkdin
  • Whatsapp

ಕಾಂಗ್ರೆಸ್‌ನೊಳಗೆ ಮತ್ತೆ ಜಾತಿ ಗಣತಿ ವರದಿ ಸಂಘರ್ಷ ಭುಗಿಲೆದ್ದಿದೆ. ಜಾತಿ ಗಣತಿ (Caste census) ವಿಚಾರದಲ್ಲಿ ಸಿದ್ದರಾಮಯ್ಯ (Siddaramaiah) ಸಂಪುಟವೇ ಇಬ್ಭಾಗವಾಗಿದೆ. ಈಗಾಗಲೇ ವರದಿ ವಿರುದ್ಧವಾಗಿ ಲಿಂಗಾಯತ, ಒಕ್ಕಲಿಗ ಸಚಿವರು ಸಹಿ ಸಂಗ್ರಹಿಸಿದ್ದಾರೆ. ಇದೀಗ ಶೋಷಿತ ಸಮುದಾಯ ಸಮಾವೇಶದಲ್ಲಿ ವರದಿ ಸ್ವೀಕಾರದ ಘೋಷಣೆ ಬೆನ್ನಲ್ಲೇ ಕಾಂತರಾಜ್ ವರದಿ ಜಾರಿಗಾಗಿ ಸಾಲು ಸಾಲು ಸಚಿವರ ಸಹಿ ಹಾಕಿದ್ದಾರೆ. ದಲಿತ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ ಸಚಿವರರು ವರದಿ ಪರ ಸಹಿ ಹಾಕಿದ್ದಾರೆ. ಕಾಂತರಾಜ್ ವರದಿ(Kantraj report) ಬಗ್ಗೆ ಸಚಿವ ಸಂಪುಟದೊಳಗೆ ಭಿನ್ನಾಭಿಪ್ರಾಯ ಇದ್ದು, ಗೊಂದಲದ ಮಧ್ಯೆ ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಮತ್ತೆ 15 ದಿನ ಜಯಪ್ರಕಾಶ್ ಹೆಗ್ಡೆ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಕಳೆದ ಬಾರಿ ಜನವರಿ 31ರವರೆಗೆ ಅವಧಿ ವಿಸ್ತರಣೆಯನ್ನು ಸರ್ಕಾರ ಮಾಡಿತ್ತು. ಮತ್ತೆ ಫೆ‌ಬ್ರವರಿ 15ರವರೆಗೂ ಅಧ್ಯಕ್ಷರ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಲೋಕಸಭೆ ಹೊಸ್ತಿಲಲ್ಲಿ ಕಾಂಗ್ರೆಸ್‌ನಲ್ಲೇ(Congress) ಜಾತಿಗಣತಿ ವರದಿ ತಿಕ್ಕಾಟ ಜೋರಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: Mandya: ಹನುಮ ಧ್ವಜ ವಿವಾದ ಪ್ರಕರಣ: ಯಾರದ್ದು ಸರಿ? ಯಾರದ್ದು ತಪ್ಪು? ಜೋರಾಗಿದೆ ಚರ್ಚೆ

Related Video