
ಆಪರೇಷನ್ ಸಿಂದೂರಕ್ಕೆ ಹೆಜ್ಜೆ ಹೆಜ್ಜೆಗೂ ಅಪಮಾನ, ಜನ ಮಾತಾಡಿದ್ರೆ ತಕ್ಷಣ ಕೇಸ್, ರಾಜಕಾರಣಿಗಳಿಗೇಕೆ ಮಾಫಿ!
ರಾಜಕಾರಣಿಗಳು ಆಪರೇಷನ್ ಸಿಂಧೂರದ ಬಗ್ಗೆ ಅಗೌರವದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಾಮಾನ್ಯ ಜನರಿಗೆ ಒಂದು ನ್ಯಾಯ, ಶಾಸಕರಿಗೆ ಒಂದು ನ್ಯಾಯವೇ? ಕೊತ್ತೂರು ಮಂಜುನಾಥ್ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪೊಲೀಸರು ಯಾಕೆ ಮೌನವಾಗಿದ್ದಾರೆ?
ಬೆಂಗಳೂರು (ಮೇ.17): ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಪರಾಕ್ರಮ ತೋರಿದ ಆಪರೇಷನ್ ಸಿಂಧೂರದ ಬಗ್ಗೆ ರಾಜಕಾರಣಿಗಳು ತಮ್ಮ ಮನಸ್ಸಿಗೆ ಬಂದಂತೆ ಮಾತನಾಡಲು ಆರಂಭಿಸಿದ್ದಾರೆ. ಸರ್ಕಾರದ ಮೇಲಂತೂ ಗೌರವವವಿಲ್ಲ. ಕನಿಷ್ಠ ಸೈನ್ಯಕ್ಕಾದರೂ ಗೌರವ ಕೊಡಬೇಕಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಸಾಮಾನ್ಯ ಜನ ರಾಜಕಾರಣಿಗಳ ವಿರುದ್ಧ ಮಾತನಾಡಿದ್ರೆ ತಕ್ಷಣ ಕೇಸ್ ಮಾಡಿ ಒಳಗೆ ಕಳಿಸುವ ಪೊಲೀಸರು, ರಾಜಕಾರಣಿಗಳು ದೇಶದ ಸೈನ್ಯದ ಬಗ್ಗೆ ಮಾತನಾಡಿದ್ರೂ ಸುಮ್ಮನೆ ಕುಳಿತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅವಮಾನ ಎನ್ನುವಂತೆ ಕಾಣುತ್ತಿದೆ.
ವಿಶ್ವಗುರು ಮೋದಿಗೆ ಅಮೆರಿಕ, ಚೀನಾ ಬಾಯ್ಕಟ್ ಮಾಡುವ ಧೈರ್ಯ ಇದೆಯಾ? ಸಚಿವ ಖರ್ಗೆ ತೀವ್ರ ವಾಗ್ದಾಳಿ!
ಆಪರೇಷನ್ ಸಿಂಧೂರ ಹೇಳಿಕೆ ಕುರಿತು ಸಾಮಾನ್ಯ ಜನರಿಗೆ ಒಂದು ನ್ಯಾಯ, ಶಾಸಕರಿಗೆ ಒಂದು ನ್ಯಾಯವಾ? ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ವಿವಾದಾತ್ಮಕ ಹೇಳಿಕೆ ನೀಡಿದರೂ ಪೊಲೀಸರು ಯಾವುದೇ ಕೇಸ್ ದಾಖಲಿಸದೇ ಸುಮ್ಮನಿದ್ದಾರೆ. ವೋಟ್ ಬ್ಯಾಂಕ್‌ಗಾಗಿ ಆಪರೇಷನ್ ಸಿಂಧೂರ ಮಾಡಿದ್ದಾರೆ ಅಂತ ಹೇಳಿದ್ದಕ್ಕೆ ವ್ಯಕ್ತಿಯ ವಿರುದ್ಧ ಕೇಸ್ ಮಾಡಿದ್ದರು. ಆದರೆ, ಕೊತ್ತೂರು ಮಂಜುನಾಥ್ ವಿರುದ್ಧ ಈವರೆಗೂ ಪ್ರಕರಣ ದಾಖಲಾಗಿಲ್ಲ.