ಭಾರತ-ಪಾಕಿಸ್ತಾನ ನಡುವಿನ ಯುದ್ಧದ ವೇಳೆ ಎಲ್ಲ ಪಕ್ಷಗಳು ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿವೆ. ನಮ್ಮ ಆಕ್ಷೇಪ ಇರುವುದು ನಮ್ಮ ವಿದೇಶಾಂಗ ನೀತಿಯ ಬಗ್ಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ಕಿಡಿಕಾರಿದರು.

ಬೆಂಗಳೂರು (ಮೇ.16): ಭಾರತ-ಪಾಕಿಸ್ತಾನ ನಡುವಿನ ಯುದ್ಧದ ವೇಳೆ ಎಲ್ಲ ಪಕ್ಷಗಳು ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿವೆ. ನಮ್ಮ ಆಕ್ಷೇಪ ಇರುವುದು ನಮ್ಮ ವಿದೇಶಾಂಗ ನೀತಿಯ ಬಗ್ಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ ಪ್ರಿಯಾಂಕ್ ಖರ್ಗೆ ಅವರು, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಯಾಕೆ ಉತ್ತರಿಸುತ್ತಿಲ್ಲ? ಭಾರತದ ವಿದೇಶಾಂಗ ನೀತಿಯನ್ನು 'ಔಟ್‌ಸೋರ್ಸ್' ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು.

ಜಮ್ಮು ಕಾಶ್ಮೀರ ಅಂತಾರಾಷ್ಟ್ರೀಯ ವಿಷಯವಾಗಿದ್ದು ಹೇಗೆ?
ಜಮ್ಮು ಕಾಶ್ಮೀರ ವಿಷಯವನ್ನು ಟ್ರಂಪ್ ಆರು ಬಾರಿ ಕದನ ವಿರಾಮದ ಮಧ್ಯಸ್ಥಿಕೆಗೆ ಸಂಬಂಧಿಸಿದಂತೆ ಉಲ್ಲೇಖಿಸಿದ್ದಾರೆ. ಶಿಮ್ಲಾ ಒಪ್ಪಂದದ ಪ್ರಕಾರ ಇದು ದ್ವಿಪಕ್ಷೀಯ ವಿಷಯವಾಗಿದ್ದರೂ, ಇದನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿ ರೂಪಿಸಲಾಗುತ್ತಿದೆ. ಇದಲ್ಲದೇ ಟ್ರಂಪ್ ಅವರ 'ಝಿರೋ ಟಾರಿಫ್' ಹೇಳಿಕೆಯಿಂದ ಭಾರತಕ್ಕೆ ಆರ್ಥಿಕ ತೊಂದರೆಯಾಗುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇದು ಬೆದರಿಕೆಯೇ ಅಥವಾ ಆಮಿಷವೋ? ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:ಅದಂಪುರಕ್ಕೆ ಪ್ರಧಾನಿ ಭೇಟಿ; ಏಪ್ರಿಲ್ 22 ರಿಂದ ಮೇ 12ರವರೆಗೆ ಮೋದಿ ಎಲ್ಲಿದ್ದರು? ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಪಹಲ್ಗಾಂ ಟೆರರಿಸ್ಟ್ ಎಲ್ಲಿದ್ದಾರೆ?

ನಮ್ಮ ವಿದೇಶಾಂಗ ನೀತಿಗಳನ್ನು ಔಟ್‌ಸೋರ್ಸ್ ಮಾಡಿದ್ದೇವೆ ಎಂದು ಒಪ್ಪಿಕೊಳ್ಳಿ, ಅಥವಾ ಜಮ್ಮು ಕಾಶ್ಮೀರವನ್ನು ಅಂತರರಾಷ್ಟ್ರೀಯ ವಿಷಯವಾಗಿ ಒಪ್ಪಿಕೊಂಡು ಅಮೆರಿಕದ ಮುಂದೆ ಮಂಡಿಯೂರಿದ್ದೇವೆ ಎಂದಾದರೂ ಹೇಳಿ ಎಂದು ಭಯೋತ್ಪಾದನೆ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಖರ್ಗೆ ತೀವ್ರವಾಗಿ ಟೀಕಿಸಿದರು. ಪೆಹಲ್ಗಾಮ್ ದುರ್ಘಟನೆಗೆ ಕಾರಣವಾದ ಭಯೋತ್ಪಾದಕರು ಎಲ್ಲಿದ್ದಾರೆ ಎಂದು ಕೇಳಿರುವ ಅವರು, 250 ಕಿಮೀ ಗಡಿಯೊಳಗೆ ಉಗ್ರರು ಒಳನುಗ್ಗಿ ವಾಪಸ್ ಹೋಗಿದ್ದಾರೆಯೇ ಅಥವಾ ಇನ್ನೂ ದೇಶದೊಳಗೆ ಇದ್ದಾರೆಯೇ ಎಂದು ಪ್ರಶ್ನಿಸಿದರು.

ನಿನ್ನೆ ಅಮೆರಿಕ ಟರ್ಕಿಗೆ 300 ಮಿಸೈಲ್ ಕೊಟ್ಟಿದ್ದಾರೆ

ಆಪರೇಷನ್ ಸಿಂದೂರ್ ಆದಮೇಲೂ ಕೂಡ ಪಾಕಿಸ್ತಾನಕ್ಕೆ 16 ಸಾವಿರ ಕೋಟಿ ಸಾಲ ಸಿಕ್ಕಿದೆ. ಆ ಸಾಲವನ್ನೂ ಕೂಡ ತಡೆ ಹಿಡಿಯಲು ನಮ್ಮ ಪ್ರಧಾನಿ ಕೈಲಿ ಆಗಿಲ್ಲ. ಇವರದ್ದೆಲ್ಲ ಟೈಟಲ್‌ಗಳು ಇವರೇ ಕೊಟ್ಟುಕೊಂಡಿರೋದು. ಹಿಂದೂ ಹೃದಯ ಸಾಮ್ರಾಟ್ ವಿಶ್ವ ಗುರು ಇದೆಲ್ಲ ಟೈಟಲ್ ಇವರೇ ಕೊಟ್ಟುಕೊಂಡಿದ್ದು. ಪಾಕಿಸ್ತಾನದ ಬೆಂಬಲಕ್ಕೆ ಟರ್ಕಿ ಬಂತು ಚೈನಾ ಬಂತು. ಯಾರಾದರೂ ನಮ್ಮ ಬೆಂಬಲಕ್ಕೆ ಅಧಿಕೃತವಾಗಿ ಬಂದರಾ? ನೂರು ದೇಶಗಳನ್ನು ಪ್ರವಾಸ ಮಾಡಿದರು ಒಬ್ಬರಾದರೂ ಪಾಕಿಸ್ತಾನವನ್ನು ಖಂಡಿಸಿದ್ರ? ಇದೇನು ಹುಚ್ಚರ ಸಂತೆನಾ? ಅಮೇರಿಕ ನಿನ್ನೆ ಟರ್ಕಿಗೆ 300 ಮಿಸೈಲ್ ಕೊಟ್ಟಿದ್ದಾರೆ. ಅಮೇರಿಕವನ್ನು ಬಾಯ್ಕಾಟ್ ಮಾಡಬೇಕಲ್ವಾ? ಬಾಯ್ಕಾಟ್ ಟ್ರಂಪ್ ಮಾಡೋ ಧೈರ್ಯ ಇವರಿಗೆ ಇದೆಯಾ ಬಾಯ್ಕಾಟ್ ಚೈನಾ ಮಾಡೋ ಧೈರ್ಯ ಇದೆಯಾ? ಅವರ ಸಾಮರ್ಥ್ಯವೇ ಇಷ್ಟು ಎಂದು ತೀವ್ರ ವಾಗ್ದಾಳಿ ನಡೆಸಿದರು.

ವಿಶ್ವಗುರು, ಹೃದಯ ಸಾಮ್ರಾಟ್ ಎಲ್ಲ ಟೈಟಲ್‌ಗಳೂ ಅವರ ಪದ್ದತಿ. ವೀರ ಸಾವರ್ಕರ್ ಗೆ ವೀರ್ ಟೈಟಲ್ ಯಾರು ಕೊಟ್ಟಿದ್ದು ಅವರಿಗೇ ಗೊತ್ತಿಲ್ಲ. ಸ್ವಯಂ ಘೋಷಿತ ವಿಶ್ವಗುರು ಮೋದಿ, ಸ್ವಯಂ ಘೋಷಿತ ಹಿಂದೂ ಹೃದಯ ಸಾಮ್ರಾಟ್. ಈ ತರಹ ನೂರು ಟೈಟಲ್ ತಾವೇ ಕೊಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಕದನ ವಿರಾಮ ಮೇ.18ರವರೆಗೆ ವಿಸ್ತರಣೆ: ಮತ್ತೊಮ್ಮೆ ಭಾರತ-ಪಾಕ್ ಡಿಜಿಎಂಒ ಮಟ್ಟದ ಸಭೆ...

ಬಿಜೆಪಿ ಮಂತ್ರಿ ಸೋಫಿಯಾ ಖುರೇಷಿಗೆ ಅವಮಾನ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಛೀಮಾರಿ ಹಾಕಿದ್ದಾರೆ. ಆರ್ ಎಸ್ ಎಸ್ ನವರು 52 ವರ್ಷದಿಂದ ತಿರಂಗಾ ಧ್ವಜವನ್ನೇ ಹಾರಿಸಿಲ್ಲ. ಈಗ ಮೋದಿಯ ಲೋಪಗಳನ್ನು ಮುಚ್ಚಿ ಹಾಕಲು ತಿರಂಗಾ ಯಾತ್ರೆ ಮಾಡ್ತಿದ್ದಾರೆ. ಬಿಜೆಪಿ ರಾಜ್ಯ ನಾಯಕರಿಗೆ ಬೇರೆ ಏನು ಕೆಲಸ ಇದೆ? ನಾವು ಕೇಳ್ತಾ ಇರುವ ಯಾವ ಪ್ರಶ್ನೆ ಕೂಡ ಇಲ್ಲಾಜಿಕಲ್ ಅಲ್ಲ. ಅದಕ್ಕೆ ಉತ್ತರ ಕೊಡಲಾಗದೇ ಆಸ್ಪತ್ರೆ ಗೆ ಸೇರಿಸಬೇಕು ಅಂತಾರೆ. ನಾವೇನಾದ್ರೂ ಕೇಳಿದ್ರೆ ಅಟೆನ್ಶನ್ ಡೈವರ್ಷನ್ ಮಾಡ್ತಾರೆ. ನಾವು ಕೇಳ್ತಿರೋ ಐದಾರು ಸರಳ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡಬೇಕು. ದೇಶದ ಜನರ ಮುಂದೆ ಮೋದಿ ಪಾರದರ್ಶಕ ಆಗಿರಬೇಕು. ಝಿರೋ ಟಾರಿಫ್‌ಗೆ ಬಂದಿದ್ದೀವಿ ಅಂತ ಟ್ರಂಪ್ ಹೇಳ್ತಿದ್ದಾರೆ. ಇದರಿಂದ ನಮ್ಮ ದೇಶಕ್ಕೆ ತೊಂದರೆ ಆಗುತ್ತೆ. ರಾಹುಲ್ ಗಾಂಧಿ ಮೇಲೆ 20-40 ಕೇಸ್ ಹಾಕಿದ್ದಾರೆ ಅವರನ್ನೇನೂ ಮಾಡಲು ಆಗಲ್ಲ. ಜನರ ನಡುವೆ ನಿಂತು ರಾಹುಲ್ ಭಾರತ್ ಜೋಡೋ ಮಾಡಿದರು. ಆ ತರಹ ಒಬ್ಬನಾದರೂ ಬಿಜೆಪಿ ನಾಯಕರು ಮಾಡಲಿ ನೋಡೋಣ? ಸವಾಲು ಹಾಕಿದ ಪ್ರಿಯಾಂಕ್ ಅವರು, ಹಾಗೇನಾದರೂ ಮಾಡಿದರೆ ಇವರು ಮಾಡಿರೋ ಕೆಲಸಕ್ಕೆ ಜನರೇ ಕಲ್ಲು ಹೊಡೆಯುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.