
New Year 2022 : ಬ್ರಿಗೇಡ್ ರೋಡ್‌ನಲ್ಲಿ ಸೆಲಬ್ರೇಶನ್‌ಗೆ ಅವಕಾಶವಿಲ್ಲ
ಬೆಂಗಳೂರು ನಗರದ ಮಟ್ಟಿಗೆ ಬಿಬಿಎಂಪಿ (BBMP) ಟಫ್‌ರೂಲ್ಸ್ ಜಾರಿಗೆ ತರುವ ಸಾಧ್ಯತೆ ಇದೆ. ಈ ಬಾರಿ ಬ್ರಿಗೇಡ್ ರೋಡ್ (Brigade Road) ಹೊಸವರ್ಷಾಚರಣೆಗೆ ಬ್ರಿಗೇಡ್ ರೋಡ್ ಅಸೋಸಿಯೇಶನ್ ಬ್ರೇಕ್ ಹಾಕಿದೆ. ಸರ್ಕಾರ ಅನುಮತಿ ಕೊಟ್ಟರೂ ಆಚರಣೆ ಇಲ್ಲ ಎಂದಿದೆ.
ಬೆಂಗಳೂರು (ಡಿ. 16): ರಾಜ್ಯದಲ್ಲಿ ಒಮಿಕ್ರೋನ್ ಭೀತಿ (Omicron Threat) ಹೆಚ್ಚಾಗಿದೆ. ಮೈಮರೆತರೆ 3 ನೇ ಅಲೆಗೆ ಆಹ್ವಾನ ನೀಡಿದಂತಾಗುವುದು. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ವರ್ಷಾಚರಣೆ (New Year Celebration 2022) ಕ್ರಿಸ್‌ಮಸ್‌ಗೆ (Chritsmas) ನಿರ್ಬಂಧ ವಿಧಿಸಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
Omicron Threat: ಹೊಸವರ್ಷ, ಕ್ರಿಸ್ಮಸ್ ಸೆಲಬ್ರೇಶನ್‌ಗೆ ನಿರ್ಬಂಧ ವಿಧಿಸಲು ತಾಂತ್ರಿಕ ಸಲಹಾ ಸಮಿತಿ ಶಿಫಾರಸು
ಡಿಸಂಬರ್ 22 ರಿಂದ ಜನವರಿ 2 ರವರೆಗೆ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಹೇಳಿದೆ. ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬೆಂಗಳೂರು ನಗರದ ಮಟ್ಟಿಗೆ ಬಿಬಿಎಂಪಿ (BBMP) ಟಫ್‌ರೂಲ್ಸ್ ಜಾರಿಗೆ ತರುವ ಸಾಧ್ಯತೆ ಇದೆ. ಈ ಬಾರಿ ಬ್ರಿಗೇಡ್ ರೋಡ್ (Brigade Road) ಹೊಸವರ್ಷಾಚರಣೆಗೆ ಬ್ರಿಗೇಡ್ ರೋಡ್ ಅಸೋಸಿಯೇಶನ್ ಬ್ರೇಕ್ ಹಾಕಿದೆ. ಸರ್ಕಾರ ಅನುಮತಿ ಕೊಟ್ಟರೂ ಆಚರಣೆ ಇಲ್ಲ ಎಂದಿದೆ.