
'ಖಾಕಿ'ಗೆ ಕೋವಿಡ್ ಕಂಟಕ: ಪೊಲೀಸರ ಬೆನ್ನುಬಿದ್ದ ಮಹಾಮಾರಿ ಕೊರೋನಾ..!
ಪೊಲೀಸ್ ಟ್ರೈನಿಂಗ್ ಸ್ಕೂಲ್‌ನಲ್ಲಿ 90 ಮಂದಿಗೆ ಕೊರೋನಾ| ಪೊಲೀಸರಿಗೆ ಅಂಟಿದ ಕೋವಿಡ್ ಪ್ರಕರಣಗಳ ಸಾವಿರ ಗಡಿ ದಾಟಿದೆ| ಬೆಂಗಳೂರು ನಗರವೊಂದರಲ್ಲೇ 1084 ಪೊಲೀಸರಿಗೆ ಕೋವಿಡ್ ದೃಢ|
ಬೆಂಗಳೂರು(ಜು.23): ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರನ್ನ ಬೆಂಬಿಡದೆ ಕಾಡುತ್ತಿದೆ. ಹೌದು, ನಿನ್ನೆ(ಬುಧವಾರ) ಒಂದೇ ದಿನ ಬರೋಬ್ಬರಿ 94 ಪೊಲೀಸರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲಿನ ಸಿಬ್ಬಂದಿಗೆ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಯಚೂರು: ಪಿಪಿಇ ಕಿಟ್ ಇಲ್ಲದೆ ಕೊರೋನಾ ಸೋಂಕಿತನ ಅಂತ್ಯಕ್ರಿಯೆ..!
ಇನ್ನು ಪೊಲೀಸ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಕೂಡ 90 ಮಂದಿಗೆ ಕೊರೋನಾ ವಕ್ಕರಿಸಿದೆ. ಈ ಮೂಲಕ ಪೊಲೀಸರಿಗೆ ಅಂಟಿದ ಕೋವಿಡ್ ಪ್ರಕರಣಗಳ ಸಾವಿರ ಗಡಿ ದಾಟಿದೆ. ಬೆಂಗಳೂರು ನಗರವೊಂದರಲ್ಲೇ 1084 ಪೊಲೀಸರಿಗೆ ಮಹಾಮಾರಿ ಕೋವಿಡ್ ವಕ್ಕರಿಸಿದೆ.