ಪಾಕಿಸ್ತಾನದಿಂದ ಐಸಿಸ್ ಉಗ್ರ ಹೇಗೆಲ್ಲಾ ಪ್ಲಾನ್ ಮಾಡಿದ್ದ ಗೊತ್ತಾ? ಎನ್ಐಎ ತನಿಖೆಯಲ್ಲಿ ಬಯಲಾಯ್ತು ಕ್ರಿಮಿಯ ಅಸಲಿ ಸಂಚು..!

ಸುವರ್ಣ ನ್ಯೂಸ್‌ನಲ್ಲಿ ಕರ್ನಲ್ - ಮಾಜ್ ಮುನೀರ್ ನಡುವಿನ ಚಾಟ್ ಡೀಟೈಲ್ಸ್ 
ಪ್ರೊಟೆಕ್ಟೆಡ್ ಟೆಕ್ಸ್ಟ್ ಅನ್ನೋ ಆ್ಯಪ್ ಮೂಲಕ ಕರ್ನಲ್-ಮುನೀರ್ ಮಧ್ಯೆ ಚಾಟ್
ಮುನೀರ್ ಮಧ್ಯೆ ನಡೆದಿದ್ದ ನೂರಾರು ಮೆಸೇಜ್ ರಿಟ್ರೈವ್ ಮಾಡಿರುವ ಎನ್ಐಎ

First Published Mar 1, 2024, 11:16 AM IST | Last Updated Mar 1, 2024, 11:51 AM IST

ಕರ್ನಾಟಕದಲ್ಲಿ ಉಗ್ರರು ನಡೆಸಿದ್ದ ಸಂಚಿನ ಕುರಿತ ಕಂಪ್ಲೀಟ್ ಡಿಟೈಲ್ಸ್‌ನನ್ನು ನಿಮ್ಮ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ತೋರಿಸಲಾಗುತ್ತಿದೆ. ಐಸಿಸ್ ಉಗ್ರರ ನಡುವಿನ ಸಂಪರ್ಕದ ವಿವರ ನಮ್ಮಲ್ಲಿ ಮಾತ್ರ ಲಭ್ಯವಾಗಿದೆ. ಪಾಕಿಸ್ತಾನದಲ್ಲಿ(Pakistan) ಕೂತ ಐಸಿಸ್(ISIS) ಉಗ್ರ ಹಲವಾರು ಪ್ಲ್ಯಾನ್‌ ಮಾಡಿದ್ದು, ಇದು ಎನ್ಐಎ ತನಿಖೆಯಲ್ಲಿ(NIA) ಬಯಲಾಗಿದೆ. ಐಸಿಸ್ ಹ್ಯಾಂಡ್ಲರ್ನ ಸಂಚಿನ ಸಂಪೂರ್ಣ ಮಾಹಿತಿಯನ್ನು ಎನ್‌ಐಎ ಸಂಗ್ರಹಿಸಿದೆ. ಶಿವಮೊಗ್ಗ, ಮಂಗಳೂರು ಸ್ಫೋಟದ ಆರೋಪಿಗಳ ಭಯಾನಕತೆ ಬಯಲಾಗಿದೆ. ಕರ್ನಾಟಕ(Karnataka) ಯುವಕರಿಗೆ ಐಸಿಸ್ ಉಗ್ರರು ಹೇಗೆಲ್ಲಾ ತರಬೇತಿ ನೀಡ್ತಿದ್ರು ಎಂಬುದು ಬಯಲಾಗಿದೆ. ಐಸಿಸ್ ಹ್ಯಾಂಡ್ಲರ್ ಕರ್ನಲ್ ಹಾಗೂ ಮಾಜ್ ಮುನೀರ್ ಮಧ್ಯೆ ಚಾಟಿಂಗ್ ನಡೆದಿದೆ. 2021ರಲ್ಲಿ ಕರ್ನಲ್ ಹಾಗೂ ಮಾಜ್ ಮುನೀರ್ ನಡುವೆ ನಡೆಸಿದ್ದ ಚಾಟ್. ತುಂಗಾ ತೀರದಲ್ಲಿ ಭಾರತದ ಧ್ವಜ ಸುಟ್ಟ ಕೇಸಲ್ಲಿ ಮಾಜ್ 2ನೇಯ ಆರೋಪಿಯಾಗಿದ್ದು, ಮಾಜ್ ಮುನೀರ್ ವಿಚಾರಣೆ ನಡೆಸಿದಾಗ ಭಯಾನಕ ಸತ್ಯಗಳು ಬಯಲಾಗಿವೆ.

ಇದನ್ನೂ ವೀಕ್ಷಿಸಿ:  Kalaburagi: ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ: ಪಾರ್ಟಿ ನೆಪದಲ್ಲಿ ಜಮೀನಿಗೆ ಕರೆಸಿ ಸ್ನೇಹಿತರಿಂದಲೇ ಮರ್ಡರ್‌