ನಾನಿದಕ್ಕೆ ಅರ್ಹನಲ್ಲ; ಬ್ರಹ್ಮಶ್ರೀ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ ಕಟೀಲ್

'ಬ್ರಹ್ಮಶ್ರಿ' ಪ್ರಶಸ್ತಿಯನ್ನು ವೇದಿಕೆ ಮೇಲೆ ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಇದಕ್ಕೆ ಜನಾರ್ದನ ಪೂಜಾರಿ ಮಾತ್ರ ಅರ್ಹರೆಂದು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು (ಮಾ. 01): 'ಬ್ರಹ್ಮಶ್ರಿ' ಪ್ರಶಸ್ತಿಯನ್ನು ವೇದಿಕೆ ಮೇಲೆ ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಇದಕ್ಕೆ ಜನಾರ್ದನ ಪೂಜಾರಿ ಮಾತ್ರ ಅರ್ಹರೆಂದು ಹೇಳಿದ್ದಾರೆ. ಮಂಗಳೂರಿನ ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಘೋಷಿಸಿದ್ದ 'ಬ್ರಹ್ಮಶ್ರೀ' ಪ್ರಶಸ್ತಿಯ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಹೀಗಾಗಿ ನಳೀನ್ ಕುಮಾರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಆಗಮಿಸಿದರೂ ಪ್ರಶಸ್ತಿ ಸ್ವೀಕರಿಸಿಲ್ಲ. 

ಇದು ಟ್ರೇಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ, ಮುಕೇಶ್‌ ಅಂಬಾನಿಗೆ ಜೀವ ಬೆದರಿಕೆ

'ಪತ್ರಿಕೆ ನೋಡಿದಾಗ ನನಗೆ ಪ್ರಶಸ್ತಿ ಘೋಷಿಸಿರೋದು ತಿಳಿಯಿತು. ಆಗಲೇ ನಾನು ಸಂಘದ ಅಧ್ಯಕ್ಷ ಕೆ.ಟಿ.ಸುವರ್ಣರಿಗೆ ಕೈ ಮುಗಿದು ಬೇಡ ಅಂದಿದ್ದೆ. ಈ ಜಿಲ್ಲೆಯಲ್ಲಿ ಬ್ರಹ್ಮಶ್ರೀ ಪ್ರಶಸ್ತಿ ಪಡೆಯಲು ಅರ್ಹ ವ್ಯಕ್ತಿ ಇದ್ದರೆ ಅದು ಜನಾರ್ದನ ಪೂಜಾರಿ ಮಾತ್ರ. ನಮ್ಮಂಥ ರಾಜಕಾರಣಿಗಳು ಈ ಪ್ರಶಸ್ತಿಗೆ ಅರ್ಹರಲ್ಲ. ಒಬ್ಬ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ರಾಜಕಾರಣಿ ಅಂತ ಸನ್ಮಾನಕ್ಕೆ ಅರ್ಹರಿದ್ರೆ ಅದು ನನ್ನ ಗುರು ಜನಾರ್ದನ ಪೂಜಾರಿ ಒಬ್ಬರೇ' ಎಂದಿದ್ದಾರೆ. 

Related Video