B Shivaram: ಬಿಜೆಪಿಗಿಂತ ಹೆಚ್ಚು ಭ್ರಷ್ಟಚಾರ ಕಾಂಗ್ರೆಸ್‌ನಲ್ಲೇ ನಡೆಯುತ್ತಿದೆ: ಬಿ.ಶಿವರಾಂ ಗಂಭೀರ ಆರೋಪ

ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ್ವಿ. ಇದೀಗ ಹಾಸನ ಜಿಲ್ಲೆಯಲ್ಲಿ 40% ಮೀರಿ ಲಂಚ ನಡೆಯುತ್ತಿದೆ ಎಂದು ಮಾಜಿ ಸಚಿವ ಬಿ.ಶಿವರಾಂ ಗಂಭೀರ ಆರೋಪ ಮಾಡಿದ್ದಾರೆ.  

First Published Feb 2, 2024, 10:57 AM IST | Last Updated Feb 2, 2024, 10:57 AM IST

ಕಾಂಗ್ರೆಸ್ ಸರ್ಕಾರದ ವಿರುದ್ಧ 40% ಲಂಚದ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ವಪಕ್ಷದ ನಾಯಕರಿಂದಲೇ ಗಂಭೀರ ಆರೋಪ ಕೇಳಿಬಂದಿದೆ. ಬಿಜೆಪಿ(BJP) ಆಡಳಿತದಂತೇ ಲಂಚಾವತಾರ ನಡೆಯುತ್ತಿದೆ ಎಂದು ಕಾಂಗ್ರೆಸ್(Congress) ನಾಯಕರೊಬ್ಬರು ಹೇಳಿದ್ದಾರೆ. ಹಾಸನ(Hassan) ಜಿಲ್ಲೆಯಲ್ಲಿ 40% ಮೀರಿ ಲಂಚ ನಡೆಯುತ್ತಿದೆ ಎಂದು ಸ್ವಪಕ್ಷದವರ ವಿರುದ್ಧ ಮಾಜಿ ಸಚಿವ ಬಿ.ಶಿವರಾಂ(B.Shivaram) ಗಂಭೀರ ಆರೋಪ ಮಾಡಿದ್ದಾರೆ. ನಾವು ಅಧಿಕಾರಕ್ಕೆ ಬರುವಾಗ ಬಿಜೆಪಿ ವಿರುದ್ಧ ಕಮಿಷನ್ ಆರೋಪ ಮಾಡಿದ್ವಿ. ಆದರೆ ಈಗ ಜಿಲ್ಲೆಯಲ್ಲಿ ಅದಕ್ಕಿಂತ ಹೆಚ್ಚಾಗಿದೆ. ಕಡಿವಾಣ ಹಾಕಿ ಎಂದು ನಾನೇ ಹೇಳಿದ್ದೇನೆ ಎಂದು ಮಾಜಿ ಸಚಿವ ಬಿ.ಶಿವರಾಂ ಹೇಳಿದ್ದಾರೆ. ಬಿ ಶಿವರಾಂ ಆರೋಪ‌ಕ್ಕೆ ಡಿಕೆ ಶಿವಕುಮಾರ್‌ (DK shivakumar)ಸಿಡಿಮಿಡಿಕೊಂಡಿದ್ದಾರೆ. ಏನೆ ಇದ್ರು ಬಂದು ನಮ್ಮ ಹತ್ರ ಮಾತಾಡಬೇಕು. ಇಲ್ಲದಿದ್ರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಡಿಕೆಶಿ ವಾರ್ನಿಂಗ್ ಮಾಡಿದ್ದಾರೆ. ಇನ್ನೂ ಬಿ. ಶಿವರಾಂ ಹೇಳಿಕೆ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಬೆಂಗಳೂರಲ್ಲಿ ಸಿಎಂ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಜ್ಞಾನವಾಪಿಯಲ್ಲಿ 31 ವರ್ಷದ ಬಳಿಕ ಮೊದಲ ಪೂಜೆ: ಮಧ್ಯರಾತ್ರಿ ಭಕ್ತರಿಂದ ಹರಹರ ಮಹದೇವ ಘೋಷಣೆ

Video Top Stories