ಜ್ಞಾನವಾಪಿಯಲ್ಲಿ 31 ವರ್ಷದ ಬಳಿಕ ಮೊದಲ ಪೂಜೆ: ಮಧ್ಯರಾತ್ರಿ ಭಕ್ತರಿಂದ ಹರಹರ ಮಹದೇವ ಘೋಷಣೆ

ಜ್ಞಾನವಾಪಿ ಮಸೀದಿಯಲ್ಲಿ ಹರಹರ ಮಹದೇವ ಘೋಷಣೆ ಮೊಳಗಿದೆ. ಮಧ್ಯರಾತ್ರಿಯೇ ಭಕ್ತರಿಂದ ಹರಹರ ಮಹದೇವ ಘೋಷಣೆ ಕೂಗಲಾಗಿದೆ.
 

Share this Video
  • FB
  • Linkdin
  • Whatsapp

ಜ್ಞಾನವಾಪಿ ಮಸೀದಿಯಲ್ಲಿ(Gnanavapi Masjid) 31 ವರ್ಷದ ಬಳಿಕ ಮೊದಲ ಪೂಜೆ ನಡೆದಿದೆ. ಮಧ್ಯರಾತ್ರಿಯಿಂದಲೇ ಹರಹರ ಮಹದೇವ(Harahara Mahadev) ಘೋಷಣೆ ಮೊಳಗಿದೆ. ಕೋರ್ಟ್ ತೀರ್ಪು ಬಂದ ಕೆಲವೇ ಕ್ಷಣದಲ್ಲಿ ಪೂಜೆ ನೆರವೇರಿದೆ. ಮೊನ್ನೆ ರಾತ್ರಿಯೇ ನ್ಯಾಸ್ ನೆಲಮಾಳಿಗೆಯಲ್ಲಿ ಗಂಟೆನಾದ ಕೇಳಿಬಂದಿದೆ. ಮಧ್ಯರಾತ್ರಿಯೇ ಭಕ್ತರಿಂದ ಹರಹರ ಮಹದೇವ ಘೋಷಣೆ ಕೂಗಲಾಗಿದೆ. ಭಕ್ತಿಯಿಂದ ಆರತಿ ಎತ್ತಿ ಭಕ್ತರು ಪೂಜೆ ಸಲ್ಲಿಸಿದ್ದಾರೆ. ಜ್ಞಾನವಾಪಿ ಮುಂದಿದ್ದ ರಸ್ತೆಯ ನಾಮಫಲಕ ಬದಲಾವಣೆ ಮಾಡಲಾಗಿದೆ. ಜ್ಞಾನವಾಪಿ ಮಸೀದಿ ನಾಮಫಲಕ ಜ್ಞಾನವಾಪಿ ಮಂದಿರ ಎಂದು ಬದಲಾವಣೆ ಆಗಿದೆ. ಜ್ಞಾನವಾಪಿ ಸುತ್ತಮುತ್ತ ಕೂಡ ಮಂದಿರ ನಾಮಫಲಕ ಹಾಕಲಾಗಿದೆ. ಜ್ಞಾನವಾಪಿ ಪೂಜೆಗೆ ಮಸೀದಿ ಕಮಿಟಿ ವಿರೋಧ ವ್ಯಕ್ತಪಡಿಸಿದೆ. ವಾರಣಾಸಿ ಜಿಲ್ಲಾ ಕೋರ್ಟ್‌ನ ಆದೇಶವನ್ನು ಮುಸ್ಲಿಮರು ಪ್ರಶ್ನಿಸಿದ್ದಾರೆ. ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿಯಿಂದ ಮೇಲ್ಮನವಿ ಸಲ್ಲಿಸಲಾಗಿದೆ.

ಇದನ್ನೂ ವೀಕ್ಷಿಸಿ:  Interim Budget: ಯಾವ ಇಲಾಖೆಗೆ ಎಷ್ಟು ಅನುದಾನ? ಮಹಿಳೆಯರಿಗೆ, ರೈತರಿಗೆ ಸಿಕ್ಕಿದ್ದೇನು?

Related Video