Asianet Suvarna News Asianet Suvarna News

ಪ್ರತಿ ತಾಲೂಕಿಗೆ 2 ಗೋಶಾಲೆ ಆರಂಭ: ಸಚಿವ ಪ್ರಭು ಚವ್ಹಾಣ

ನರೇಗಾ ಕಾರ್ಯಕ್ರಮದ ಮೂಲಕ ಗೋಸಂರಕ್ಷಣಾ ಕಾರ್ಯ| ಪೂರ್ವ ತಯಾರಿ ಮಾಡಿಕೊ೦ಡೇ ಗೋಹತ್ಯೆ ವಿದೇಯಕ ಜಾರಿ| ರೈತರಿಗೆ ಅನುಕೂಲವಾಗುವ ಗೋಹತ್ಯೆ ವಿದೇಯಕ ವಿಧಾನ ಪರಿಷತ್‌ನಲ್ಲೂ ಅಂಗೀಕಾರ| 

First Published Jan 29, 2021, 1:47 PM IST | Last Updated Jan 29, 2021, 1:47 PM IST

ಬೆಂಗಳೂರು(ಜ.29):  ಗ್ರಾಮೀಣಾಭಿವೃದ್ಧಿ ಇಲಾಖೆಯ ನರೇಗಾ ಕಾರ್ಯಕ್ರಮದ ಮೂಲಕ ಗೋಸಂರಕ್ಷಣಾ ಕಾರ್ಯವನ್ನ ಮಾಡುವುದಾಗಿ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜತೆ ಮಾತನಾಡಿದ ಅವರು, ಗೋರಕ್ಷಣೆ ಹಿನ್ನೆಲೆಯಲ್ಲಿ ಪ್ರತಿ ತಾಲೂಕಿಗೆ ಎರಡು ಗೋಶಾಲೆಗಳನ್ನ ಆರಂಭಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ಇಲ್ಲಿ ಮಕ್ಕಳು 10 ತರಗತಿ ಬಳಿಕ ಮುಂದಕ್ಕೆ ಓದಲು ಭಯ ಬೀಳ್ತಾರೆ : ಮಾಜಿ ಸಿಎಂ ಕ್ಷೇತ್ರವಿದು

ಪೂರ್ವ ತಯಾರಿ ಮಾಡಿಕೊ೦ಡೇ ಗೋಹತ್ಯೆ ವಿದೇಯಕ ಜಾರಿ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವ ಈ ಗೋಹತ್ಯೆ ವಿದೇಯಕ ವಿಧಾನ ಪರಿಷತ್‌ನಲ್ಲೂ ಅಂಗೀಕಾರವಾಗಲಿದೆ ಎಂದು ಹೇಳಿದ್ದಾರೆ.