ಸಚಿವರು ಬರ್ತಾರೆಂದು ಚಿಕಿತ್ಸೆಗೆಂದು ಬಂದ ವೃದ್ದನನ್ನು ಆಸ್ಪತ್ರೆಯಿಂದ ಹೊರ ಹಾಕಿದ ಪೊಲೀಸರು

- ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಚಿವರ ಭೇಟಿ, ರೋಗಿಗಳಿಗೆ ಚಿಕಿತ್ಸೆಯಿಲ್ಲ- ವೃದ್ದರೊಬ್ಬರನ್ನು ಆಸ್ಪತ್ರೆಯಿಂದ ಹೊರಹಾಕಿದ ಸಿಬ್ಬಂದಿ- ಮಾಧ್ಯಮಗಳಲ್ಲಿ ವರದಿ ಪ್ರಸಾರದ ಬಳಿಕ ಎಚ್ಚೆತ್ತ ಸಚಿವರು

Share this Video
  • FB
  • Linkdin
  • Whatsapp

ಬೆಂಗಳೂರು (ಮೇ. 21): ಆಸ್ಪತ್ರೆಗೆ ಬಂದಿದ್ದ ವೃದ್ದನನ್ನು ಪೊಲೀಸರು ಹೊರಹಾಕಿರುವ ಅಮಾನವೀಯ ಘಟನೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಬಸವರಾಜಯ್ಯ ಎಂಬುವವರು ಮುಂಜಾನೆಯೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ಬರುತ್ತಾರೆ. ಆದರೆ ಚಿಕಿತ್ಸೆ ನೀಡದೇ ವೃದ್ಧರನ್ನು ಹೊರಹಾಕಲಾಗಿದೆ. ಸಚಿವ ಬಸವರಾಜ್ ಅವರು ಆಸ್ಪತ್ರೆಗೆ ಭೇಟಿ ನೀಡುವ ಹಿನ್ನಲೆಯಲ್ಲಿ ಸಿಬ್ಬಂದಿಗಳು ಅದರಲ್ಲಿ ಬ್ಯುಸಿಯಾಗಿದ್ದರು. ಹೊರ ಹಾಕಿದ ವಿಚಾರ ಮಾಧ್ಯಮಗಳಲ್ಲಿ ಬಂದ ನಂತರ, ಸಚಿವರು ಎಚ್ಚೆತ್ತುಕೊಂಡು ವೃದ್ದರಿಗೆ ಚಿಕಿತ್ಸೆ ನೀಡಲು ಹೇಳಿದ್ಧಾರೆ. 

ವ್ಯಾಕ್ಸಿನ್ ಹೆಚ್ಚಿಸಿ, 3 ನೇ ಅಲೆ ತಪ್ಪಿಸಿ: ಸರ್ಕಾರಕ್ಕೆ ತಜ್ಞರ ಸಲಹೆ

Related Video