ವ್ಯಾಕ್ಸಿನ್ ಹೆಚ್ಚಿಸಿ, 3 ನೇ ಅಲೆ ತಪ್ಪಿಸಿ: ಸರ್ಕಾರಕ್ಕೆ ತಜ್ಞರ ಸಲಹೆ

- ಈಗ ಸೋಂಕಿತರಾದವರ ರೋಗನಿರೋಧಕ ಶಕ್ತಿ 8 ತಿಂಗಳಲ್ಲಿ ನಶಿಸಲಿದೆ

- ಜನರಿಗೆ ಲಸಿಕೆ ನೀಡಿ ಕೃತಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಬೇಕು

- ಲಸಿಕೆ ಆಂದೋಲನಕ್ಕೆ ವೇಗ ನೀಡುವುದೇ ಈಗಿರುವ ಏಕೈಕ ಮಾರ್ಗ

First Published May 21, 2021, 1:28 PM IST | Last Updated May 21, 2021, 3:00 PM IST

ಬೆಂಗಳೂರು (ಮೇ. 21): ಕೊರೊನಾ 2 ನೇ ಅಲೆ ಭೀಕರತೆ ನಡುವೆ 3 ನೇ ಅಲೆ ಭೀತಿ ಶುರುವಾಗಿದೆ. ಜೂನ್ ಅಂತ್ಯಕ್ಕೆ 2 ನೇ ಅಲೆ ಇಳಿಕೆಯಾಗಲಿದೆ. ಇನ್ನು 6-8 ತಿಂಗಳಲ್ಲಿ 3 ನೇ ಅಲೆ ಶುರುವಾಗುವ ಸಾಧ್ಯತೆಯನ್ನು ತಜ್ಞರು ಹೇಳಿದ್ದಾರೆ. ದೇಹದಲ್ಲಿ ಸೃಷ್ಟಿಯಾದ ರೋಗನಿರೋಧಕ ಶಕ್ತಿ 6-8 ತಿಂಗಳಲ್ಲಿ ನಶಿಸುತ್ತದೆ. ಇದಕ್ಕೆ ಇರುವ ಏಕೈಕ ಪರಿಹಾರ ಲಸಿಕೆ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಆದಷ್ಟು ಲಸಿಕೆ ನೀಡುವುದರಿಂದ ಸೋಂಕು ಏರಿಕೆ ತಡೆಯಬಹುದು ಎಂದಿದ್ದಾರೆ. 

ರೆಮ್‌ಡೆಸಿವಿರ್ ಪರಿಣಾಮಕಾರಿಯಲ್ವಾ.? ಮಾರ್ಗಸೂಚಿಯಿಂದ ಕೈ ಬಿಡ್ತಿರೋದ್ಯಾಕೆ..?