ರಾಜ್ಯದ ಜನತೆಗೆ ಮತ್ತೊಂದು ಶಾಕ್: ಏರಿಕೆಯಾಗುತ್ತಾ ಹಾಲಿನ ದರ..?
ಕೆಎಂಎಫ್ ಅಧಿಕಾರಿಗಳು ಹಾಲಿನ ದರವನ್ನು ಐದು ರೂಪಾಯಿಗೆ ಏರಿಸುವಂತೆ ಸಿಎಂ ಸಿದ್ದರಾಮಯ್ಯಗೆ ಪ್ರಸ್ತಾಪ ಸಲ್ಲಿಸಿದ್ದಾರೆ.
ರಾಜ್ಯದ ಜನತೆಗೆ ತರಕಾರಿ, ಬೇಳೆ-ಕಾಳು ಬೆಲೆ ಏರಿಕೆಯ ನಡುವೆ ಮತ್ತೊಂದು ಬರೆ ನೀಡಲು ಕೆಎಂಎಫ್ ಅಧಿಕಾರಿಗಳು (KMF Officer) ಮುಂದಾಗಿದ್ದಾರೆ. ಹಾಲಿನ ದರ (Milk Price) ಏರಿಸುವಂತೆ ಸಿಎಂ ಸಿದ್ದರಾಮಯ್ಯಗೆ(CM Siddaramaiah) ಕೆಎಂಎಫ್ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ದರ ಏರಿಕೆ ಸಂಬಂಧ ಇಂದು ಸಂಜೆ ಕೆಎಂಎಫ್ ಆಡಳಿತ ಮಂಡಳಿ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಕೆಎಂಎಫ್ ಅಧಿಕಾರಿಗಳು ಐದು ರೂಪಾಯಿ ಹಾಲಿನ ದರ ಏರಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಸರ್ಕಾರ 3 ರೂಪಾಯಿ ಹೆಚ್ಚಳಕ್ಕೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ಸಿಎಂ ಜೊತೆ ಚರ್ಚಿಸಿದ ಬಳಿಕ ಕೆಎಂಎಫ್ ಅಧಿಕಾರಿಗಳು ನಿರ್ಧಾರ ಮಾಡಲಿದ್ದಾರೆ. ಹಾಗಾಗಿ ಹಾಲಿನ ದರ ಇಂದು ನಿರ್ಧಾರ ಆಗುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: Today Horoscope: ಇಂದಿನ ನಿಮ್ಮ ಭವಿಷ್ಯ ಹೇಗಿದೆ..? ಈ ದಿನ ಅಮ್ಮನವರ ಪ್ರಾರ್ಥನೆ ಮಾಡಿ..