Today Horoscope: ಇಂದಿನ ನಿಮ್ಮ ಭವಿಷ್ಯ ಹೇಗಿದೆ..? ಈ ದಿನ ಅಮ್ಮನವರ ಪ್ರಾರ್ಥನೆ ಮಾಡಿ..

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

First Published Jul 21, 2023, 8:51 AM IST | Last Updated Jul 21, 2023, 8:51 AM IST

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ, ಶುಕ್ರವಾರ, ಚತುರ್ಥಿ ತಿಥಿ, ಮಖಾ ನಕ್ಷತ್ರ. ಅಧಿಕ ಶ್ರಾವಣದ ಶುಕ್ರವಾರ ಖಂಡಿತವಾಗಿಯೂ ಪೂಜೆಯನ್ನು ಮಾಡಿ. ಪೂಜೆಯನ್ನು ಮಾಡುವುದರಿಂದ ಒಳ್ಳೆಯ ಚಿಂತನೆ, ಕೆಲಸಗಳಿಗೆ ಇದು ಅಣಿಯಾಗುತ್ತದೆ. ಮನಸ್ಸಿಗೆ ಇದು ಉಲ್ಲಾಸವನ್ನು ನೀಡುತ್ತದೆ. ಒಳ್ಳೆಯ ಶುಭ ತರಂಗಳನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ಪೂಜೆಯನ್ನು ಮಾಡುವುದರಿಂದ ಒಳ್ಳೆಯ ಕೆಲಸಕ್ಕೆ ಮನಸ್ಸು ಮುಂದಾಗುತ್ತದೆ. ಹಾಗಾಗಿ ಇಂದು ಅಮ್ಮನವರ ಪ್ರಾರ್ಥನೆ, ಲಲಿತಾ ಸಹಸ್ರನಾಮವನ್ನು ಹೇಳಿ. 

ಇದನ್ನೂ ವೀಕ್ಷಿಸಿ:  ಐಎಎಸ್ ಅಧಿಕಾರಿಗಳ ದುರ್ಬಳಕೆ, ದಲಿತ ಅಸ್ತ್ರ ಹಿಡಿದು ಬಿಜೆಪಿ-ಕಾಂಗ್ರೆಸ್ ಹೋರಾಟ!