Asianet Suvarna News Asianet Suvarna News

News Hour: ಅಕ್ರಮಕ್ಕೆ ಸಹಕರಿಸಿದ್ರೆ ಕಾಣಿಕೆ, ಇಲ್ಲದಿದ್ರೆ ಕುಣಿಕೆ ಗ್ಯಾರಂಟಿ!

ವಾಲ್ಮೀಕಿ ನಿಗಮದ ಅವ್ಯವಹಾರಕ್ಕೆ ಅಧಿಕಾರಿಯೇ ಬಲಿಯಾಗಿದ್ದಾರೆ. 187 ಕೋಟಿ ಹಗರಣಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್​ನೋಟ್​ನಲ್ಲಿ ಮೂರು ಅಧಿಕಾರಿಗಳ ಹೆಸರು ಉಲ್ಲೇಖ ಮಾಡಿದ್ದಾರೆ.
 

ಬೆಂಗಳೂರು (ಮೇ.28): ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್‌ ಆತ್ಮಹತ್ಯೆ ಕಾಂಗ್ರೆಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಡೆತ್‌ನೋಟ್‌ನಲ್ಲಿ ಮೂವರು ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಿ ಅವರು ಸಾವಿಗೆ ಶರಣಾಗಿದ್ದಾರೆ. 

ಇದರ ಬೆನ್ನಲ್ಲಿಯೇ 187 ಕೋಟಿ ಅವ್ಯವಹಾರದಲ್ಲಿ ಸಚಿವ ಬಿ. ನಾಗೇಂದ್ರ ವಿರುದ್ಧ ಆರೋಪ ಬಂದಿದೆ. ರಾಜೀನಾಮೆ ಕೊಡಲ್ಲ.. ಸಿಐಡಿ ತನಿಖೆಯಾಗಲಿ ಎಂದ ಸಚಿವ ಹೇಳಿದ್ದಾರೆ. ಸಾವಿಗಿಂತಾ ಸಾಕ್ಷಿ ಬೇಕಾ ಎಂದು ಕೇಸರಿಪಡೆ ಪ್ರಶ್ನೆ ಮಾಡಿದೆ.

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 80-85 ಕೋಟಿ ಲೂಟಿ ಆರೋಪ: ಅವ್ಯವಹಾರಕ್ಕೆ ಬೆದರಿ ಅಧಿಕಾರಿ ಆತ್ಮಹತ್ಯೆ!

ಟ್ವಿಟರ್‌ನಲ್ಲೂ ಈ ಬಗ್ಗೆ ಕಿಡಿಕಾರಿರುವ ಬಿಜೆಪಿ, ಅಕ್ರಮಕ್ಕೆ ಸಹಕಾರ ಕೊಟ್ಟರೆ ಕಾಣಿಕೆ, ಇಲ್ಲದಿದ್ರೆ ಕುಣಿಕೆ ಗ್ಯಾರಂಟಿ. ನಿಮ್ಮ ಕಮೀಷನ್‌ ದಾಹಕ್ಕೆ ಇನ್ನೆಷ್ಟು ಬಲಿ ಆಗಬೇಕು. ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿದೆ.