ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 80-85 ಕೋಟಿ ಲೂಟಿ ಆರೋಪ: ಅವ್ಯವಹಾರಕ್ಕೆ ಬೆದರಿ ಅಧಿಕಾರಿ ಆತ್ಮಹತ್ಯೆ!

ವಾಲ್ಮೀಕಿ ಅಭಿವೃದ್ಧಿ ನಿಗಮದ ಸೂಪರಿಂಡೆಂಟ್ ಆತ್ಮಹತ್ಯೆ ಪ್ರಕರಣ
ನನ್ನ ಸಾವಿಗೆ ನಿಗಮದ ಅಧಿಕಾರಿಗಳು ಕಾರಣ ಎಂದು ಡೆತ್ ನೋಟ್ 
ಡೆತ್ ನೋಟ್  ಬರೆದಿಟ್ಟು ಸೂಪರಿಂಡೆಂಟ್ ಚಂದ್ರಶೇಖರ್ ಆತ್ಮಹತ್ಯೆ 
 

First Published May 28, 2024, 10:50 AM IST | Last Updated May 28, 2024, 10:50 AM IST

ಶಿವಮೊಗ್ಗದ (Shivamogga) ಮಹರ್ಷಿ ವಾಲ್ಮೀಕಿ ನಿಗಮದಲ್ಲಿ(Maharshi Valmiki Nigam) 80-85 ಕೋಟಿ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ಇಲಾಖೆ ಸಚಿವರ ಸೂಚನೆ ಮೇರೆಗೆ  ಹಣ ವರ್ಗಾವಣೆ ಮಾಡಲಾಗಿದೆಯಂತೆ. ಹಣ ವರ್ಗಾವಣೆಗೆ ಬೇಸತ್ತು ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ(Officer Suicide) ಮಾಡಿಕೊಂಡಿದ್ದು, ನಿಗಮದಲ್ಲಿ ಲೂಟಿ ಸಹಿಸಲಾಗದೆ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ವಾಲ್ಮೀಕಿ ನಿಗಮದ ಅಧಿಕಾರಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಅಧಿಕಾರಿಗಳ ವಿರುದ್ಧ ಜಾಮೀನು ರಹಿತ ಸೆಕ್ಷನ್‌ನನ್ನು ಪೊಲೀಸರು ಹಾಕಿದ್ದಾರೆ. ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ ಅಕೌಂಟ್ ಆಫೀಸರ್ ಪರಶುರಾಮ್, ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶುಚಿಸ್ಮಿತ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 306 ಅನ್ವಯ ಎಫ್ ಐ ಆರ್ ದಾಖಲು. ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಪತ್ನಿ ಕವಿತಾ ನೀಡಿದ ದೂರಿನ ಮೇರೆಗೆ ಹಾಗೂ ಡೆತ್ ನೋಟ್ ಆಧರಿಸಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಇಲಾಖೆ ಸಚಿವರು ಅಧಿಕಾರಿಗಳಿಗೆ ಮೌಖಿಕ ಸೂಚನೆ  ನೀಡಿದ್ದಾರೆ. ಅಧಿಕಾರಿಗಳು 80 ರಿಂದ 85 ಕೋಟಿ ಹಗರಣ ಮಾಡಿದ್ದಾರೆಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ. ತಾನು ಈ ಹಗರಣದಲ್ಲಿ ಭಾಗಿಯಾಗಿಲ್ಲ ಆದರೆ ತನ್ನನ್ನು ಸಿಲುಕಿಸುವ ಯತ್ನ ಮಾಡಲಾಗಿದೆ ಎಂಬ ಭಯದಿಂದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ನಲ್ಲಿ ಉಪ ಖಾತೆ ತೆರೆದು ಅವ್ಯವಹಾರ ಮಾಡಲಾಗಿದೆ. ಈ ಹಗರಣದಲ್ಲಿ ನನ್ನ ಪಾತ್ರವಿಲ್ಲ , ಅವಮಾನ ಮಾಡಲಾಗುತ್ತಿದೆ  ಎಂದು ಡೆತ್‌ನೋಟ್‌ನಲ್ಲಿ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಹಿಂದೂಗಳ ಮನೆಗಳಿಗೆ ನುಗ್ಗಿ ಅನ್ಯಕೋಮಿನ ಯುವಕರಿಂದ ಬೆದರಿಕೆ? ಗಲಾಟೆ ತಡೆಯಲು ಮುಂದಾದವರ ಮೇಲೂ ಹಲ್ಲೆ?