ರಾಜ್ಯದ ಮತ್ತೊಬ್ಬ ಶಾಸಕನಿಗೆ ಕೊರೋನಾ ದೃಢ..!

ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್‌ಗೆ ಕೋವಿಡ್ 19 ಸೋಂಕಿರುವುದು ಖಚಿತವಾಗಿದೆ. ಮೂರು ದಿನಗಳ ಹಿಂದಷ್ಟೇ ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ಕೊರೋನಾ ಸೋಂಕು ವಕ್ಕರಿಸಿಕೊಂಡಿತ್ತು. ಕಾಂಗ್ರೆಸ್ ಶಾಸಕ ರಂಗನಾಥ್ ಸೋಂಕಿತ ಪೊಲೀಸ್‌ ಸಂಪರ್ಕದಲ್ಲಿದ್ದರು.

Share this Video
  • FB
  • Linkdin
  • Whatsapp

ಕುಣಿಗಲ್(ಜು.06): ಕೊರೋನಾ ಹೆಮ್ಮಾರಿ ಜನಸಾಮಾನ್ಯರು, ಕೊರೋನಾ ವಾರಿಯರ್ಸ್ ಮಾತ್ರವಲ್ಲದೇ ಜನಪ್ರತಿನಿಧಿಗಳ ಮೇಲು ಕೆಂಗಣ್ಣು ಬೀರಿದೆ. ಇದೀಗ ರಾಜ್ಯದ ಮತ್ತೊಬ್ಬ ಶಾಸಕನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್‌ಗೆ ಕೋವಿಡ್ 19 ಸೋಂಕಿರುವುದು ಖಚಿತವಾಗಿದೆ. ಮೂರು ದಿನಗಳ ಹಿಂದಷ್ಟೇ ಬಿಜೆಪಿ ಶಾಸಕ ಭರತ್ ಶೆಟ್ಟಿಗೆ ಕೊರೋನಾ ಸೋಂಕು ವಕ್ಕರಿಸಿಕೊಂಡಿತ್ತು. ಕಾಂಗ್ರೆಸ್ ಶಾಸಕ ರಂಗನಾಥ್ ಸೋಂಕಿತ ಪೊಲೀಸ್‌ ಸಂಪರ್ಕದಲ್ಲಿದ್ದರು.

ಬೆಂಗಳೂರಲ್ಲಿ ಕಳೆದೈದು ದಿನಗಳಲ್ಲಿ 50 ಜನ ಬಲಿ..!

ರಂಗನಾಥ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಬಂಧಿ ಕೂಡಾ ಹೌದು. ಕೊರೋನಾದಿಂದಾಗಿ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲೂ ಕಾಂಗ್ರೆಸ್ ಶಾಸಕ ರಂಗನಾಥ್ ಪಾಲ್ಗೊಂಡಿದ್ದರು. ಇದೀಗ ಬೆಂಗಳೂರಿನಲ್ಲಿರುವ ನಿವಾಸದಲ್ಲೇ ಹೋಮ್ ಕ್ವಾರಂಟೈನ್ ಆಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Related Video