ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕಕ್ಕೆ ಶಾಕ್ ! ರಾಜ್ಯ ಕಳುಹಿಸಿದ್ದ ಟ್ಯಾಬ್ಲೋಗೆ ಇನ್ನೂ ಸಿಕ್ಕಲ್ಲ ಅನುಮತಿ !
ರಾಜ್ಯ ಕಳುಹಿಸಿದ್ದ ನಾಲ್ಕು ಸ್ತಬ್ಧ ಚಿತ್ರಗಳಿಗೆ ಇನ್ನು ಅನುಮತಿ ಸಿಕ್ಕಿಲ್ಲ. ಹಾಗಾಗಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ರಾಜ್ಯ ಸ್ತಬ್ಧ ಚಿತ್ರ ಬಳಕೆಯಾವುದು ಅನುಮಾನವಾಗಿದೆ.
ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕಕ್ಕೆ(ಖಾರನಾತಾಕಾ) ಶಾಕ್ ನೀಡಲಾಗಿದ್ದು, ರಕ್ಷಣಾ ಸಚಿವಾಲಯದ ಆಯ್ಕೆ ಸಮಿತಿಯಿಂದ ರಾಜ್ಯವನ್ನು ನಿರ್ಲಕ್ಷ್ಯ ಮಾಡಲಾಗಿದೆ. ರಾಜ್ಯ ಕಳುಹಿಸಿದ್ದ ಟ್ಯಾಬ್ಲೋ ಚಿತ್ರಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಕಳೆದ 14 ವರ್ಷದಿಂದ ಕರ್ನಾಟಕದ ಸ್ತಬ್ಧ ಚಿತ್ರ ಪ್ರದರ್ಶನವಾಗುತ್ತಿದೆ. ನಾಲ್ಕು ಮಾದರಿಯ ಸ್ತಬ್ಧಚಿತ್ರಗಳನ್ನು ರಾಜ್ಯ ಸರ್ಕಾರ ಕಳುಹಿಸಿತ್ತು. ಬ್ರಾಂಡ್ ಬೆಂಗಳೂರು (Brand bengaluru), ನಾಲ್ವಡಿ ಕೃಷ್ಣರಾಜ ಒಡೆಯರ್ (Nalvadi Krishnaraja Wadiyar), ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ 2 (Bengaluru Airport Terminal 2), ಅಣ್ಣಮ್ಮ ದೇವಸ್ಥಾನದ (Annamma Temple) ಮಾದರಿಗಳನ್ನು ಕಳುಹಿಸಲಾಗಿತ್ತು. ರಾಜ್ಯದ ಸ್ತಬ್ಧ ಚಿತ್ರಕ್ಕೆ ಈ ಬಾರಿ ಅನುಮತಿ ನಿರಾಕರಣೆ ಮಾಡಿದೆ ಎಂದು ರಾಜ್ಯದ ವಾರ್ತಾ ಇಲಾಖೆಯ ದೆಹಲಿ ಮೂಲಗಳು ಮಾಹಿತಿ ತಿಳಿಸಿವೆ.
ಇದನ್ನೂ ವೀಕ್ಷಿಸಿ: NarayanaGowda Arrest : ಒಂದು ಕೇಸ್‌ನಲ್ಲಿ ರಿಲೀಸ್..ಮತ್ತೊಂದು ಪ್ರಕರಣದಲ್ಲಿ ಕರವೇ ನಾರಾಯಣಗೌಡ ಬಂಧನ