ಸೂಟ್‌ಕೇಸ್ ಸಂಸ್ಕೃತಿ ಯಾರದ್ದು ಎಂದು ರಾಜ್ಯಕ್ಕೆ ಗೊತ್ತಿದೆ ರೀ: ಜಮೀರ್‌ಗೆ ರೇವಣ್ಣ ಟಾಂಗ್
ಸಿಂದಗಿ ಉಪಚುನಾವಣಾ ಕಣದಲ್ಲಿ ಮೂರೂ ಪಕ್ಷದವರ ಆರೋಪ, ಪ್ರತ್ಯಾರೋಪ, ವಾಕ್ಸಮರ ಜೋರಾಗಿದೆ. ಜಮೀರ್ ಅಹ್ಮದ್ ಎಚ್‌ಡಿಕೆ ವಿರುದ್ಧ ಸೂಟ್‌ಕೇಸ್ ರಾಜಕಾರಣದ ಆರೋಪ ಮಾಡಿರುವುದು ದಿನವಿಡೀ ಚರ್ಚೆಯಾಗಿದೆ. ಜಮೀರ್ ಹೇಳಿಕೆಗೆ ಎಚ್ ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ. 25): ಸಿಂದಗಿ ಉಪಚುನಾವಣಾ ಕಣದಲ್ಲಿ ಮೂರೂ ಪಕ್ಷದವರ ಆರೋಪ, ಪ್ರತ್ಯಾರೋಪ, ವಾಕ್ಸಮರ ಜೋರಾಗಿದೆ. ಜಮೀರ್ ಅಹ್ಮದ್ (Zameer Ahmad) ಎಚ್‌ಡಿಕೆ (HD Kumaraswamy) ವಿರುದ್ಧ ಸೂಟ್‌ಕೇಸ್ ರಾಜಕಾರಣದ ಆರೋಪ ಮಾಡಿರುವುದು ದಿನವಿಡೀ ಚರ್ಚೆಯಾಗಿದೆ. ಜಮೀರ್ ಹೇಳಿಕೆಗೆ ಎಚ್ ಡಿ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಬೊಗಳುವ ನಾಯಿಗಳಿಗೆಲ್ಲಾ ಉತ್ತರ ನೀಡಲಿಕ್ಕೆ ಆಗುತ್ತಾ'
' ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್‌ಗೆ ಈ ಪರಿಸ್ಥಿತಿ ಬಂತಲ್ಲ ಎಂದು ನನಗೆ ವ್ಯಥೆಯಾಗುತ್ತಿದೆ. ಸೂಟ್‌ಕೇಸ್ ಸಂಸ್ಕೃತಿ ಯಾರಿಗಿದೆ ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ. ನಮ್ಮನ್ನ ಬಿಜೆಪಿಯ ಬಿ ಟೀಂ ಎಂದು ಅಂದು ಕರೆದಿದ್ದ ನೀವು, ಅದೇ ಬಿ ಟೀಂ ಮನೆ ಬಾಗಿಲಿಗೆ ಬಂದಿದ್ದೀರಿ ಅಲ್ವಾ..?' ಎಂದು ರೇವಣ್ಣ ಪ್ರಶ್ನಿಸಿದ್ದಾರೆ.