Asianet Suvarna News Asianet Suvarna News

ನೇತ್ರದಾನಕ್ಕೆ ಅಪ್ಪು ಸ್ಪೂರ್ತಿ: ಕಣ್ಣುದಾನಕ್ಕೆ ಸಾಲುಗಟ್ಟಿ ನಿಂತ ಜನ..!

Nov 6, 2021, 11:40 AM IST
  • facebook-logo
  • twitter-logo
  • whatsapp-logo

ಬೆಂಗಳೂರು(ನ.06): ಅಗಲಿದ ಮೇಲೂ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಜೀವಂತವಾಗಿದ್ದಾರೆ. ಅಪ್ಪು ನೇತ್ರದಾನ ಮಾಡಿದ ಮೇಲೆ ಜನರು ಕಣ್ಣು ದಾನ ಮಾಡಲು ಕ್ಯೂ ನಿಲ್ಲುತ್ತಿದ್ದಾರೆ. ಅಣ್ಣಾವ್ರ ಹಾದಿಯಲ್ಲೇ ಪುನೀತ್‌ ರಾಜ್‌ಕುಮಾರ್‌ ನೇತ್ರದಾನ ಮಾಡಿದ್ದಾರೆ. ನಾಲ್ಕು ಅಂಧರಿಗೆ ಬೆಳಕಾಗಿದ್ದಾರೆ ಅಪ್ಪು. ರಾಜ್ಯಾದ್ಯಂತ ನೇತ್ರದಾನಕ್ಕೆ ಪುನೀತ್‌ ರಾಜ್‌ಕುಮಾರ್‌ ಸ್ಪೂರ್ತಿಯಾಗಿದ್ದಾರೆ. 

ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

ಕಣ್ಣು ದಾನ ಮಾಡಲು ಜನರು ಸಾಲು ಗಟ್ಟಿ ನಿಲ್ಲುತ್ತಿದ್ದಾರೆ. ಅಪ್ಪು ನೇತ್ರದಾನ ಮಾಡಿದ ಮೇಲೆ ರಾಜ್ಯಾದ್ಯಂತ ಪ್ರತಿ ದಿನ 500 ಮಂದಿ ಕಣ್ಣುದಾನ ಮಾಡುತ್ತಿದ್ದಾರೆ. ಇನ್ನು ನೇತ್ರದಾನ ಮಾಡಲು ರಾಜ್ಯಾದ್ಯಂತ ಅಭಿಯಾನವೇ ಶುರುವಾಗಿದೆ. ಈ ಹಿಂದೆ ಡಾ. ರಾಜ್‌ಕುಮಾರ್‌ ಅವರೂ ಕೂಡ ನೇತ್ರದಾನ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದರು. ಇದೀಗ ಅಣ್ಣಾವ್ರ ಹಾದಿಯಲ್ಲೇ ಸಾಗಿ ಪುನೀತ್‌ ಕೂಡ ನಾಲ್ಕು ಅಂಧರ ಬಾಳಿಗೆ ಬೆಳಕಾಗಿದ್ದಾರೆ.