Asianet Suvarna News Asianet Suvarna News

ಕೋಲಾರ: ಈ ಊರಲ್ಲಿ ಆಮೆಗಳಿಗೆ ತೊಂದ್ರೆ ಕೊಟ್ರೆ ಕಷ್ಟ ಕಟ್ಟಿಟ್ಟ ಬುತ್ತಿ..!

*   ಈ ಊರಿನಲ್ಲಿ ಪ್ರತಿಯೊಬ್ಬರ ಮನೆಯ ಗೋತ್ರವೂ ಆಮೆ! ಆಮೆಗಳೇ ಆರಾಧ್ಯ ದೈವ
*   ನೂರಾರು ವರ್ಷಗಳಿಂದ ಗ್ರಾಮದ ಕಲ್ಯಾಣಿಯಲ್ಲಿ ವಾಸವಾಗಿರುವ ಸಾವಿರಾರು ಆಮೆಗಳು 
*   ಆಮೆಗೆ ಪೂಜೆ ಸಲ್ಲಿಸುವ ಗ್ರಾಮಸ್ಥರು; ಗ್ರಾಮಸ್ಥರೆ ಕಾವಲುಗಾರರು, ರಕ್ಷಕರು, ಪೂಜಕರು 
 

ಕೋಲಾರ(ನ.06):  ಆ ಪ್ರಾಣಿಗಳು ಆ ಗ್ರಾಮದ ಜನರ ಆರಾಧ್ಯ ದೈವ. ಆ ದೈವವನ್ನು ಊರಿನ ಕಲ್ಯಾಣಿಗಳಲ್ಲಿ ಸಾಕಿರುವ ಜನರು ಆ ಪ್ರಾಣಿ ತಮ್ಮ ಮನೆ ಬಾಗಿಲಿಗೆ ಬಂದ್ರೆ ಅದೃಷ್ಟ ಎಂದು ಭಾವಿಸುತ್ತಾರೆ. ಆ ಪ್ರಾಣಿ ರಸ್ತೆಯಲ್ಲಿ ಸಿಕ್ಕರೆ ಪೂಜೆ ಮಾಡಿ ಮತ್ತೆ ಆ ಕಲ್ಯಾಣಿಯಲ್ಲಿ ಬಿಟ್ಟು ನೂರಾರು ವರ್ಷಗಳಿಂದ ಅವುಗಳನ್ನು ರಕ್ಷಣೆ ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಯಾವುದಾ ಪ್ರಾಣಿ ಈ ಸ್ಟೋರಿ ನೋಡಿ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅರಹಳ್ಳಿ ಗ್ರಾಮದಲ್ಲಿ. ಕಳೆದ ನೂರಾರು ವರ್ಷಗಳಿಂದ ಗ್ರಾಮದ ಕಲ್ಯಾಣಿಯಲ್ಲಿ ವಾಸವಾಗಿರುವ ಸಾವಿರಾರು ಆಮೆಗಳು ಈ ಗ್ರಾಮದ ಜನರ ಆರಾಧ್ಯ ದೈವ. ಗ್ರಾಮದಲ್ಲಿ ಆಮೆ ಗೋತ್ರದ ಜನರೇ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾವಿರಾರು ಆಮೆಗಳಿಗೆ ಗ್ರಾಮಸ್ಥರೇ ಕಾವಲುಗಾರರು, ರಕ್ಷಕರು, ಪೂಜಕರು. ಮಧ್ಯಾಹ್ನದ ಬಿಸಿಲಿಗೆ ತಲೆ ಹೊರ ಹಾಕಿ ಬಂಡೆಗಳ ಮೇಲೆ ವಿಶ್ರಾಂತಿ ಪಡೆಯುವ ಆಮೆಗಳು, ಯಾವುದಾದ್ರು ಹೊಸ ಮುಖಗಳು ಕಾಣಿಸುತ್ತಿದ್ದಂತೆ ನೀರಿಗೆ ಹಾರುತ್ತವೆ. 

ಕೇಕ್‌ನಲ್ಲಿ ಅರಳಿದ 'ಗೋವರ್ಧನಗಿರಿ' ; ಇಸ್ಕಾನ್‌ನಲ್ಲಿ ದೀಪಾವಳಿ ವಿಶೇಷ ಪೂಜೆ

ಕೆಲವೊಮ್ಮೆ ಆಮೆ ಮೊಟ್ಟೆ ಇಡಲು ಹಾಗೂ ಸಂತಾನಕ್ಕೆ ಹೊಲ-ಗದ್ದೆ, ಮನೆಗಳಿಗೆ ಬಂದಾಗ ಅದೃಷ್ಟ ಎಂದು ಆಮೆಗೆ ವಿಶೇಷ ಪೂಜೆ ಸಲ್ಲಿಸಿ, ಅವುಗಳನ್ನ ಮತ್ತೆ ಕಲ್ಯಾಣಿಯ ನೀರಿನಲ್ಲಿ ಬಿಡಲಾಗುತ್ತೆ. ತಮಗೆ ಕಷ್ಟ ಬಂದಾಗ ಈ ಗ್ರಾಮಸ್ಥರು ಪೂಜೆ ಮಾಡೋದು ಕೂಡ ಇದೆ ಆಮೆ ದೇವರಿಗೆ. ಇನ್ನೂ ಆಮೆಗಳಿಗೆ ಯಾರಾದ್ರು ತೊಂದರೆ ಕೊಟ್ರೆ ಅವರಿಗೆ ಕಷ್ಟ ಕಟ್ಟಿಟ್ಟ ಬುತ್ತಿ ಹಾಗಾಗಿ ಆಮೆಗಳಿಗೂ ಇಲ್ಲಿನ ಗ್ರಾಮಸ್ಥರಿಗೂ ಒಂದು ರೀತಿಯ ಭಾವಾನಾತ್ಮ ಸಂಬಂಧವಿದೆ.
 

Video Top Stories