ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ

ಪೊಲೀಸರ ಸಮಯಪ್ರಜ್ಞೆಯಿಂದ ಇವತ್ತು ಕೀರ್ತನ ಬಚಾವ್​ ಆಗಿದ್ದಾಳೆ.. ಆದ್ರೆ ಈ ಕಿರಾತಕ ಸಂದೀಪ್​​​ ಇನ್ನೂ ಅದೆಷ್ಟು ಹೆಣ್ಣುಮಕ್ಕಳ ಜೊತೆ ಪ್ರೀತಿಯ ನಾಟಕವಾಡಿದ್ದಾನೋ ಗೊತ್ತಿಲ್ಲ.. ವಯಸಲ್ಲದ ವಯಸಲ್ಲಿ ಪ್ರೀತಿ ಪ್ರೇಮ ಅಂತ ತಲೆಕೆಡೆಸಿಕೊಳ್ಳೋ ಹೆಣ್ಣುಮಕ್ಕಳಿಗೆ ಈ ಸ್ಟೋರಿ ಪಾಠ..

Share this Video
  • FB
  • Linkdin
  • Whatsapp

ಆಕೆ ಕಾಲೇಜಿಗೆ ಹೋಗ್ತಿದ್ದಳು.. ಅವನು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.. ಅಕ್ಕಪಕ್ಕದ ಗ್ರಾಮದವರು.. ಅದೇಗೋ ಒಂದು ವರ್ಷದ ಹಿಂದೆ ಇಬ್ಬರ ಪರಿಚಯವಾಗಿದೆ.. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಲವ್ವರ್ಸ್​ ಆಗಿದ್ದಾರೆ.. ಒಂದು ವರ್ಷ ಪ್ರೇಮಲೋಕದಲ್ಲಿ ವಿಹರಿಸಿದ್ದಾರೆ.. ಆದರೆ ಆವತ್ತೊಂದು ದಿನ ಆ ಹುಡುಗಿ ಹೇಳದೇ ಕೇಳದೆ ಮನೆಯಿಂದ ಹೋಗಿ ಲವ್ವರ್​ ಜೊತೆ ಮದುವೆಯಾದಳು.. ಯಾಕಮ್ಮ ಹೀಗೆ ಮಾಡಿದ ಅಂತ ಪ್ರಶ್ನೆ ಮಾಡೋದಕ್ಕೂ ಆಕೆ ಹೆತ್ತವರಿಗೂ ಅವಕಾಶ ಕೊಟ್ಟಿರಲಿಲ್ಲ.. ಡೈರೆಕ್ಟಾಗಿ ಪೊಲೀಸ್​ ಠಾಣೆಗೆ ಬಂದು ನನಗೇ ನನ್ನ ಗೆಳಯನೇ ಬೇಕು ಅಂದಿದ್ದಳು.. ಆದರೆ ಈ ಟೈಂನಲ್ಲಿ ಪೊಲೀಸರು ಜಸ್ಟ್​ ಒಂದಷ್ಟು ಫೋಟೋ ತೋರಿಸಿದ್ರು ಅಷ್ಟೇ ಆ ಹುಡುಗಿ ಕೆಲವೇ ಸೆಕೆಂಡ್​ಗಳಲ್ಲಿ ಪ್ರೇಮಿ ಕಟ್ಟಿದ್ದ ತಾಳಿಯನ್ನ ಕಿತ್ತೆಸೆದು ಹೆತ್ತವರ ಜೊತೆ ಹೋಗಿದ್ಲು.. ಅಷ್ಟಕ್ಕೂ ಪೊಲೀಸರು ಯಾವ ಫೋಟೋಗಳನ್ನ ತೋರಿಸಿದ್ದು..? ಠಾಣೆಯಲ್ಲಿ ನಡೆದಿದ್ದೇನು..? ಒಂದು ದಿನದ ಮ್ಯಾರೇಜ್​​ ಕಹನಿಯೇ ಇವತ್ತಿನ ಎಫ್​​.ಐ.ಆರ್​

Related Video