ಕರುನಾಡಲ್ಲಿ ಕೊಂಚ ಬ್ರೇಕ್ ಕೊಟ್ಟ ಮಳೆರಾಯ: ತಗ್ಗದ ಪ್ರವಾಹದ ಅವಾಂತರ
ನಾರಾಯಣಪುರ ಜಲಾಶಯ ಒಳಹರಿವು ಹೆಚ್ಚಳ
110 ಅಡಿ ತಲುಪಿದ ಕೆಆರ್‌ಎಸ್ ನೀರಿನ ಮಟ್ಟ
ರಾಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿ
ಕರುನಾಡಲ್ಲಿ ಅಬ್ಬರಿಸಿ ಬೊಬ್ಬರೆಯುತ್ತಿದ್ದ ವರುಣ(Rain) ಕೊನೆಗೂ ಕೊಂಚ್ ಬ್ರೇಕ್ ನೀಡಿದ್ದಾನೆ. ವರುಣನ ಅಬ್ಬರ ಕಡಿಮೆಯಾದ್ರೂ ಅವಾಂತರಗಳು ಮಾತ್ರ ನಿಂತಿಲ್ಲ.ಇನ್ನೂ ಹಲವೆಡೆ ಪ್ರವಾಹದ(flood) ಪರಿಸ್ಥಿತಿ ಮುಂದುವರಿದಿದೆ. ಚಿಕ್ಕೋಡಿಯಲ್ಲಿ(Chikkodi) ಪ್ರವಾಹದ ರಭಸಕ್ಕೆ ನದಿಯಲ್ಲಿ ಕೊಚ್ಚಿಹೋಗಿದ್ದ ವ್ಯಕ್ತಿಯೋರ್ವ ಮರವೇರಿ ಕುಳಿತಿದ್ದ. ಸತತ 12 ಗಂಟೆಗಳ ಬಳಿಕ ನದಿಗೆ ಬಿದ್ದ ಭಜರಂಗಿ ಎಂಬ ವ್ಯಕ್ತಿಯನ್ನ ರಕ್ಷಣೆ ಮಾಡಲಾಗಿದೆ. ರಾತ್ರಿ ಬೈಕ್‌ನಲ್ಲಿ ತೆರಳುವಾಗ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಸೇತುವೆ ಮೇಲಿಂದ ನದಿಗೆ ಬಿದ್ದಿದ್ದಾನೆ. ಪ್ರವಾಹದ ಮಧ್ಯೆ ಈಜಿಕೊಂಡು ಮರದ ಆಸರೆಪಡೆದು, ರಾತ್ರಿ ಇಡೀ ಮರದ ಮೇಲೆ ಕುಳಿತಿದ್ದ. ಬೆಳಗ್ಗೆ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಬಗೆದಷ್ಟು ಬಯಲಾಗ್ತಿದೆ ‘ಉಗ್ರ’ರ ನಂಟಿನ ಜಾಲ: ಬೆಂಗಳೂರಲ್ಲಿ ಅಡಗಿ ಕುಳಿತ್ತಿದ್ದಾರಾ ಮತ್ತಷ್ಟು ಶಂಕಿತರು..?