ಬಗೆದಷ್ಟು ಬಯಲಾಗ್ತಿದೆ ‘ಉಗ್ರ’ರ ನಂಟಿನ ಜಾಲ: ಬೆಂಗಳೂರಲ್ಲಿ ಅಡಗಿ ಕುಳಿತ್ತಿದ್ದಾರಾ ಮತ್ತಷ್ಟು ಶಂಕಿತರು..?

ಉಗ್ರರ ವಿಚಾರಣೆ ವೇಳೆ ಸಿಸಿಬಿಗೆ ಸ್ಫೋಟಕ ಮಾಹಿತಿ 
ನಸೀರ್‌ಗೂ ಐವರು ಬಂಧಿತ ಶಂಕಿತ ಉಗ್ರರಿಗೂ ನಂಟು 
ಬೆಂಗಳೂರು ವಿಧ್ವಂಸಕ ಕೃತ್ಯಕ್ಕೆ ಮಾಸ್ಟರ್ ಮೈಂಡ್ ನಸೀರ್

Share this Video
  • FB
  • Linkdin
  • Whatsapp

ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಶಂಕಿತ ಉಗ್ರರ ಬಂಧನ ಪ್ರಕರಣ(Suspected terrorists) ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಬಂಧಿತ ಶಂಕಿತ ಉಗ್ರರ ವಿಚಾರಣೆ ವೇಳೆ ಮಾಸ್ಟರ್ ಮೈಂಡ್ ಹಾಗೂ ಟೀಂ ಕಂಟ್ರೋಲರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಉಗ್ರ ಸಂಘಟನೆಯ ಜಾಲ ಬೆಂಗಳೂರಲ್ಲಿ(Bengaluru) ದೊಡ್ಡ ಮಟ್ಟದಲ್ಲಿ ವಿಸ್ತರಿಸಿರುವ ಅನುಮಾನ ವ್ಯಕ್ತವಾಗಿದೆ.ಬೆಂಗಳೂರನ್ನೇ ಉಡಾಯಿಸಲು ಸ್ಕೆಚ್ ಹಾಕಿದ್ದ ಐವರು ಶಂಕಿತ ಉಗ್ರರ ವಿಚಾರಣೆ ವೇಳೆ ಸಿಸಿಬಿಗೆ(CCb) ಮತ್ತಷ್ಟು ಸ್ಫೋಟಕ ಮಾಹಿತಿ ಸಿಕ್ಕಿದೆ. ಬಂಧಿತ ಶಂಕಿತರಿಗೆ ಬೆಂಗಳೂರಿನಲ್ಲಿ ಜನನಿಬಿಡ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಬಗ್ಗೆ ಮಾಹಿತಿ ಬಿಟ್ರೆ, ಮುಂದೇನಾಗುತ್ತೆ ಅನ್ನೋದು ಗೊತ್ತೆ ಇರಲಿಲ್ವಂತೆ. ಯಾಕಂದ್ರೆ ಎಲ್ಲವನ್ನೂ ಲೀಡ್ ಮಾಡ್ತಾಯಿದ್ದಿದ್ದೇ ಜುನೈದ್. ಅಷ್ಟೇ ಅಲ್ಲ ಇದೆಲ್ಲದಕ್ಕೂ ಮಾಸ್ಟರ್ ಮೈಂಡ್ ಒನ್ಸ್ ಅಗೇನ್ ಟಿ ನಸೀರ್ ಅನ್ನೋ ಮಾಹಿತಿ ಸಿಸಿಬಿ ಬಯಲಿಗೆಳೆದಿದೆ. 

ಇದನ್ನೂ ವೀಕ್ಷಿಸಿ: ರಶ್ಮಿಕಾ ಇದ್ದಲ್ಲಿ ನಟಿ ಶ್ರೀಲೀಲಾ ಇರಲ್ವಂತೆ: ತೆಲುಗಿನಲ್ಲಿ ಎರಡು ಜಡೆ ಜಗಳ ?

Related Video