ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಸಿಗುತ್ತಾ ಎಣ್ಣೆ..? ಸರ್ಕಾರದ ಚಿಂತನೆಗೆ ಬಾರ್ ಮಾಲೀಕರ ಅಸಮಾಧಾನ!

ಗ್ಯಾರಂಟಿಗಳ ಮಧ್ಯೆ ಆರ್ಥಿಕ ಸ್ಥಿತಿ ಸುಧಾರಣೆಗೆ ಹೊಸ ಪ್ಲಾನ್  ಸಿದ್ಧಗೊಂಡಿದೆ. ಅದೇನಪ್ಪಾ ಅಂದ್ರೆ ಇನ್ಮುಂದೆ ಮಾಲ್, ಸೂಪರ್ ಮಾರ್ಕೆಟ್‌ನಲ್ಲೂ ಮದ್ಯ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ. ಆದ್ರೆ ಈ ನಿರ್ಧಾರಕ್ಕೆ ಬಾರ್ ಆಂಡ್ ಪಬ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ಸದ್ಯ ಗೊಂದಲಕ್ಕೀಡು ಮಾಡಿದೆ.
 

Share this Video
  • FB
  • Linkdin
  • Whatsapp

ಗ್ಯಾರಂಟಿಗಳ ಮಧ್ಯೆ ಆರ್ಥಿಕ ಸ್ಥಿತಿ ಸುಧಾರಣೆಗೆ ಸರ್ಕಾರ ಹೊಸ ಪ್ಲಾನ್ ಜಾರಿಗೆ ತರಲು ಚಿಂತನೆ ನಡೆಸಿದೆ ಎನ್ನಲಾಗ್ತಿದೆ. ಇನ್ಮುಂದೆ ಮಾಲ್, ಸೂಪರ್ ಮಾರ್ಕೆಟ್‌ನಲ್ಲೂ(super market) ಮದ್ಯ ಮಾರಾಟಕ್ಕೆ ಅವಕಾಶ ಕೊಟ್ರೆ ಸರ್ಕಾರದ ಖಜಾನೆ ತುಂಬಿಸಬಹುದು ಅನ್ನೋ ಯೋಚನೆಯಿದೆಯಂತೆ. ಈ ಬಗ್ಗೆ ಈಗಾಗಲೇ ಒಂದು ಸುತ್ತಿನ ಸಭೆ ಕೂಡ ನಡೆದಿದ್ದು, ಇದೆ ವಾರದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲು ಅಬಕಾರಿ ಇಲಾಖೆ(Excise Department) ಸಿದ್ದತೆ ನಡೆಸಿದೆ. ಮಾಲ್ ,ಪಬ್‌ಗಳಿಗೆ ಮದ್ಯ ಲೈಸನ್ಸ್ ಕೊಡುವ ಜೊತೆಗೆ, ಲೈಸನ್ಸ್ ಬದಲಾವಣೆಗೆ ಶೇ.5 ರಷ್ಟು ಶುಲ್ಕ ಏರಿಕೆಗೂ ಪ್ಲ್ಯಾನ್ ನಡೆಸಿದಿಯಂತೆ. ಮಾಲ್(Mall) ಹಾಗೂ ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಚಿಂತನೆ ನಡೆಸಿದ್ದು, ಬಾರ್ ಹಾಗೂ ಪಬ್ ಮಾಲೀಕರ ಅಸಮಾಧಾನಕ್ಕೆ ಕಾರಣವಾಗಿದೆ. ಜೊತೆಗೆ ಈಗಾಗಲೇ ಸುಂಕ ಹೆಚ್ಚಿಸಿದ್ದರಿಂದ ಶೇ. 20% ಮದ್ಯ ಮಾರಾಟ ಕುಸಿತವಾಗಿದೆ. ಈಗ ಹೊಸ ಬಾರ್ ಪಬ್‌ಗಳ ಜೊತೆಗೆ ಮಾಲ್‌ಗಳಿಗೂ ಅವಕಾಶ ನೀಡಿದ್ರೆ ನಮ್ಮ ಕತೆ ಏನು ಅನ್ನೋದು ಇವರ ವಾದವಾಗಿದೆ.

ಇದನ್ನೂ ವೀಕ್ಷಿಸಿ: ಖತರ್ನಾಕ್‌ ಖದೀಮರ ಬ್ಲ್ಯಾಕ್‌ ಆಂಡ್‌ ವೈಟ್‌ ಮನಿ ದಂಧೆ: 20 ಲಕ್ಷಕ್ಕೆ 1 ಕೋಟಿ ಆಸೆಗೆ ಬಿದ್ದವನಿಗೆ ಪಂಗನಾಮ

Related Video