ಖತರ್ನಾಕ್‌ ಖದೀಮರ ಬ್ಲ್ಯಾಕ್‌ ಆಂಡ್‌ ವೈಟ್‌ ಮನಿ ದಂಧೆ: 20 ಲಕ್ಷಕ್ಕೆ 1 ಕೋಟಿ ಆಸೆಗೆ ಬಿದ್ದವನಿಗೆ ಪಂಗನಾಮ

ಸದ್ದೆ ಇಲ್ಲದೆ ಉತ್ತರ ಕರ್ನಾಟಕ ಭಾಗದಲ್ಲಿ ಅದೊಂದು ಮೋಸದ ದಂಧೆ ಬೇರು ಬಿಟ್ಟಿತ್ತು. ಬ್ಲ್ಯಾಕ್‌ ಆಂಡ್‌ ವೈಟ್‌ ಮನಿ ಹೆಸ್ರಲ್ಲಿ ಖದೀಮರ ಗ್ಯಾಂಗ್‌ ಜನರನ್ನ ಮೋಸ ಮಾಡ್ತಿತ್ತು. ಈ ಗ್ಯಾಂಗ್‌ ಬೀಸಿದ ಬಲೆಗೆ ಬಿದ್ದವರು ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡು ಕಂಗಾಲಾಗಿದ್ರು. ಆದ್ರೆ ಕೊನೆಗು ಆ ಚಲಾಕಿ ಗ್ಯಾಂಗ್ ಸಿಇಎನ್‌ ಪೊಲೀಸರ ಬಲೆಗೆ ಬಿದ್ದಿದೆ. 

First Published Sep 8, 2023, 10:36 AM IST | Last Updated Sep 8, 2023, 10:36 AM IST

ಗರಿ ಗರಿ ನೋಟ್‌ಗಳು.. ಎಕ್ಸಿಬ್ಯೂಷನ್ ಸೆಂಟರ್‌ನಲ್ಲೂ ಇಷ್ಟೊಂದು ನೋಟು ಒಮ್ಮೆಯೇ ನೋಡೋಕೆ ಸಿಗೋದು ಡೌಟ್. ಆದ್ರಿಲ್ಲಿ ಬ್ಲಾಕ್ ಅಂಡ್ ವೈಟ್ ಮನಿ ದಂಧೆ ಕೋರರ ಬೇಟೆಯಾಡಿದ ಪೊಲೀಸರು 19 ಲಕ್ಷ ಗುಡ್ಡೆಹಾಕಿದ್ದಾರೆ. ಬ್ಲ್ಯಾಕ್‌ ಅಂಡ್‌ ವೈಟ್‌ ಮನಿ(black-white money) ಹೆಸ್ರಲ್ಲಿ ಹಣವನ್ನ 5 ಪಟ್ಟು ಡಬಲ್‌ ಮಾಡಿಕೊಡೋದಾಗಿ ಈ ವಚಂಕರು  ಪಂಗನಾಮ ಹಾಕುತ್ತಿದ್ರು. ಆದ್ರೀಗ ವಂಚಕ ಜಾಲ ವಿಜಯಪುರ ಸಿಇಎನ್‌ ಪೊಲೀಸರ(Police) ಬಲೆಗೆ ಬಿದ್ದಿದೆ. ವಿಜಯಪುರ (Vijaypur)ಜಿಲ್ಲೆಯ ಬಬಲೇಶ್ವರ ಪಟ್ಟಣದ ಚಂದ್ರಶೇಖರ್‌ ಕನ್ನೂರ್‌ ಅನ್ನೋರನ್ನ  ಗೋಕಾಕ್‌ ಮೂಲದ ಲಕ್ಷ್ಮೀ ಕಂಕಣವಾಡಿ ಪರಿಚಯಿಸಿಕೊಂಡಿದ್ದಳು. ವೈಟ್‌ ಮನಿ ಕೊಟ್ಟರೆ ಅದಕ್ಕೆ ಐದು ಪಟ್ಟು ಬ್ಲ್ಯಾಕ್‌ ಮನಿ ಕೊಡ್ತೀವಿ ಎಂದು ಪುಸಲಾಯಿಸಿದ್ದಳು. ಅತಿ ಆಸೆಗೆ ಬಿದ್ದ ಚಂದ್ರಶೇಖರ್ 20 ಲಕ್ಷಕ್ಕೆ  ಒಂದು ಕೋಟಿ ಹಣ ಸಿಗುತ್ತೆ ಅನ್ನೋ ಆಸೆಗೆ ಬಿದ್ದು ಹಣ ಕೊಟ್ಟಿದ್ದಾರೆ. ಲಕ್ಷ್ಮೀ ಅಂಡ್ ಗ್ಯಾಂಗ್ ಆತನಿಂದ 20 ಲಕ್ಷ ವೈಟ್ ಮನಿ ನೀಡಿದಾಗ, ಅವರು ಒಂದು ಬಾಕ್ಸ್‌ ಕೊಟ್ಟು, ಇದ್ರಲ್ಲಿ ಒಂದು ಕೋಟಿ ಇದೆ ಎಂದಿದ್ದಾರೆ. ಮನೆಗೆ ಹೋಗಿ ನೋಡಿದ್ರೆ ಬಾಕ್ಸ್‌ ತುಂಬೆಲ್ಲ ಇರೋದು ಬಿಳಿ ಪೇಪರ್‌, ನೋಟ್‌ ಬುಕ್ಸ್‌.. ಮೋಸ ಹೋದ ಬಳಿಕ ಚಂದ್ರಶೇಖರ್‌ ಸಿಇಎನ್‌ ಪೊಲೀಸರಿಗೆ(CEN police) ದೂರು ನೀಡಿದ್ರು. ಆರಂಭದಲ್ಲಿ ಚಂದ್ರಶೇಖರ್‌ 1 ಸಾವಿರ ಕೊಟ್ಟಾಗ ಖದೀಮರ ಗ್ಯಾಂಗ್‌ 5 ಸಾವಿರ ಮೌಲ್ಯದ ಅಸಲಿ ನೋಟುಗಳನ್ನೇ ಕೊಟ್ಟಿತ್ತು. ಇದನ್ನೇ ನಂಬಿ ಬಳಿಕ 20 ಲಕ್ಷಕ್ಕೆ ಚಂದ್ರಶೇಖರ್ ವ್ಯವಹಾರ ಕುದುರಿಸಿದ್ರು.. ಆಗ ಸಿಕ್ಕಿದ್ದು ಬರೀ ಪೇಪರ್, ನೋಟ್‌ಬುಕ್‌ಗಳು. ದೂರು ಸ್ವೀಕರಿಸಿದ ಸಿಇಎನ್‌ ಇನ್ಸಪೆಕ್ಟರ್ ರಮೇಶ್  ನೇತೃತ್ವದ ತಂಡ ಮೋಸದ ಜಾಲ ಬಲೆಗೆ ಬೀಳಿಸಿದೆ. 

ಇದನ್ನೂ ವೀಕ್ಷಿಸಿ:  ಸನಾತನ ಧರ್ಮ ಹೆಚ್‌ಐವಿ, ಕುಷ್ಠರೋಗದಿಂದ ಕೂಡಿದೆ: ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ರೆಡಿ ಎಂದ ಎ. ರಾಜಾ