BIG 3 Heroes: ರಕ್ತದಾನಿ ಗಣೇಶ್ ಶರ್ಮಾ ಮತ್ತು ಸುಂದರ ಅಂಗನವಾಡಿಯ ರೂವಾರಿ
ಇವರೇ ನೋಡಿ ರಿಯಲ್ ಹೀರೋಗಳು. ಅಸಮಾನ್ಯ ಸಾಧಕರನ್ನ ಪರಿಚಯಿಸಿವುದೇ ಬಿಗ್ 3 ಕಾರ್ಯಕ್ರಮ. ಎಲ್ಲರನ್ನೂ ಅಚ್ಚರಿ, ಸ್ಪೂರ್ತಿಯಾಗಿಸುತ್ತೆ ಇವರ ಕಾರ್ಯ.
ಮೈಸೂರು/ಬಾಗಲಕೋಟೆ(ಆ.20): ಮೈಸೂರಿನವರಾದ ಗಣೇಶ್ ಕುಮಾರ್ ಶರ್ಮಾ ಅಪಘಾತದಲ್ಲಿ ಗಾಯಗೊಂಡು ಕಾಲು ಕಳೆದುಕೊಂಡಿದ್ದಾರೆ. ಉದ್ಯೋಗವಿಲ್ಲದ ಗಣೇಶ್ ಅವರು ಬರೋಬ್ಬರಿ 26 ಬಾರಿ ರಕ್ತದಾನ ಮಾಡಿ ಕಷ್ಟದಲ್ಲಿರುವವರಿಗೆ ಜೀವದಾತ ಆಗಿದ್ದಾರೆ.
BIG 3: ಮಹಿಳೆಯರ ಕನಸಿಗೆ ಕತ್ತರಿ, ಉಚಿತ ಹೊಲಿಗೆ ತರಬೇತಿ ಕೇಂದ್ರ ಬಂದ್
ಇನ್ನು ನರ್ಸರಿ ಶಾಲೆಗಳಿಗೆ ಅಂಗನವಾಡಿ ಕೇಂದ್ರವೊಂದು ಸೆಡ್ಡು ಹೊಡೆದಿದೆ. ಹೌದು, ಈ ಅಂಗನವಾಡಿ ಕೇಂದ್ರ ಇರೋದು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹನಗಂಡಿಯಲ್ಲಿದೆ.11 ಲಕ್ಷದಲ್ಲಿ ಅಂಗನವಾಡಿ ಕೇಂದ್ರದ ಬಿಲ್ಡಿಂಗ್ ನಿರ್ಮಾವಾಗಿದ್ದರೆ, 3 ಲಕ್ಷ ವೆಚ್ಚದಲ್ಲಿ ಆಟದ ಮೈದಾನ ನಿರ್ಮಾಣವಾಗಿದೆ. ಒಟ್ಟು 21 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ. ಧರಣೇಶ ಹಾಗೂ ಕರಿಯಪ್ಪ ಅವರ ಇಚ್ಚಾಶಕ್ತಿಂದ ಇಂದು ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ.