BIG 3: ಮಹಿಳೆಯರ ಕನಸಿಗೆ ಕತ್ತರಿ, ಉಚಿತ ಹೊಲಿಗೆ ತರಬೇತಿ ಕೇಂದ್ರ ಬಂದ್
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಉಚಿತ ಮಹಿಳಾ ಹೊಲಿಗೆ ತರಬೇತಿ ಕೇಂದ್ರ ಸ್ಥಗಿತ
ಚಿಕ್ಕಮಗಳೂರು(ಆ.19): ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಯ ಉಚಿತ ಮಹಿಳಾ ಹೊಲಿಗೆ ತರಬೇತಿ ಕೇಂದ್ರ ಸ್ಥಗಿತಗೊಂಡಿದೆ. ಕೊರೋನಾ ಸಮಯದಲ್ಲಿ ಮುಚ್ಚಿದ್ದರಿಂದ ಇದೀಗ ಬಹಳಷ್ಟು ಯುವತಿಯರು ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ. 2008 ರಲ್ಲಿ ಆರಂಭವಾದ ಕೇಂದ್ರಕ್ಕೆ ಸರ್ಕಾರದ ವತಿಯಿಂದ ಪ್ರತಿ ವರ್ಷ 20 ಮಂದಿ ಕನಿಷ್ಟ ಏಳನೇ ತರಗತಿ ಪಡೆದ ನಿರುದ್ಯೋಗಿ ಮಹಿಳೆಯರನ್ನ ಆಯ್ಕೆ ಮಾಡಿ ಉಚಿತವಾಗಿ ಹೊಲಿಗೆ ತರಬೇತಿ ನೀಡಲಾಗುತ್ತಿತ್ತು. ಅವರಿಗೆ ಪ್ರತಿ ತಿಂಗಳು 300 ರೂ. ಗೌರವ ಧನ ನೀಡಲಾಗುತ್ತಿತ್ತು. ಆದರೆ, ಇದೀಗ ಹೊಲಿಗೆ ತರಬೇತಿ ಕೇಂದ್ರ ಬಂದ್ ಆಗಿದೆ. ಹೀಗಾಗಿ ನಿರುದ್ಯೋಗಿ ಮಹಿಳೆಯರು ಸಂಕಷ್ಟವನ್ನ ಎದುರಿಸುವಂತಾಗಿದೆ.
ಬಿಜೆಪಿ ಸರ್ಕಾರದಿಂದ ಡಿಕೆಶಿ ವಿರುದ್ಧ ಹೊಸ ತನಿಖಾಸ್ತ್ರ: ಕನಕಪುರ ಬಂಡೆಗೆ ಮತ್ತೆ ಕಂಟಕ?