ಶಿವಮೊಗ್ಗ ಹುಣಸೋಡಿನಲ್ಲಿ ಭೀಕರ ಸ್ಫೋಟ, ಮೋದಿ ಸಂತಾಪ

ಶಿವಮೊಗ್ಗದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಮಹಾದುರಂತವೊಂದು ಸಂಭವಿಸಿದೆ. ಗಣಿ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ. 

First Published Jan 22, 2021, 11:31 AM IST | Last Updated Jan 22, 2021, 11:36 AM IST

ಬೆಂಗಳೂರು (ಜ. 22): ಶಿವಮೊಗ್ಗದ ಅಕ್ರಮ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಮಹಾದುರಂತವೊಂದು ಸಂಭವಿಸಿದೆ. ಗಣಿ ಪ್ರದೇಶದಲ್ಲಿ ಬಂಡೆಗಳನ್ನು ಸ್ಫೋಟಿಸಲು ಲಾರಿಯಲ್ಲಿ ಸಂಗ್ರಹಿಸಿಟ್ಟಿದ್ದ ಹತ್ತಾರು ಪೆಟ್ಟಿಗೆಯಷ್ಟು ಜಿಲೆಟಿನ್ ಏಕಕಾಲದಲ್ಲಿ ಸ್ಫೋಟಿಸಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ.

ಹುಣಸೋಡು ಮಹಾದುರಂತ, ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ  

ಈ ಮಹಾದುರಂತದ ಬಗ್ಗೆ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಮಹಾದುರಂತದಲ್ಲಿ ಕೆಲವರು ಸಾವನ್ನಪ್ಪಿರುವುದು ನೋವನ್ನುಂಟು ಮಾಡಿದೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲು ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.