ಕೊರೊನಾ 2 ನೇ ಅಲೆ ಅಂತ್ಯ ಯಾವಾಗ.? ತಜ್ಞರು ಕೊಟ್ಟ ಭರವಸೆ ಇದು
- ಜೂನ್ ಅಂತ್ಯಕ್ಕೆ 2ನೇ ಅಲೆ ಅಂತ್ಯ?
- 6-8 ತಿಂಗಳಲ್ಲಿ 3ನೇ ಅಲೆ ಸಾಧ್ಯತೆ
- ವ್ಯಾಕ್ಸಿನ್ ಹಾಕಿಸಿ 3ನೇ ಅಲೆ ತಪ್ಪಿಸಿ, ಕೇಂದ್ರದ ಸಮಿತಿ ಸದಸ್ಯನ ಸಲಹೆ
ಬೆಂಗಳೂರು (ಮೇ. 21): ಕೊರೊನಾ 2 ನೇ ಅಲೆ ಯಾವಾಗ ಇಳಿಕೆಯಾಗುತ್ತೆ? ಯಾವಾಗ ಕೊರೊನಾದಿಂದ ಮುಕ್ತಿ ಪಡೆಯಬಹುದು.? ಎಂಬ ಪ್ರಶ್ನೆ ಎಲ್ಲರದ್ದು. ಈ ಪ್ರಶ್ನೆಗೆ ತಜ್ಞರು ಉತ್ತರ ಹೀಗಿದೆ.
ಶಿಕ್ಷಕರು, ಲೈನ್‌ಮ್ಯಾನ್‌ಗಳು, ಎಲ್‌ಪಿಜಿ ಹುಡುಗರು 'ಫ್ರಂಟ್‌ಲೈನ್ ವಾರಿಯರ್ಸ್'
'ಜೂನ್- ಜುಲೈ ವೇಳೆಗೆ ಕೊರೋನಾ ದೈನಂದಿನ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಆಗುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಜೂನ್ ಅಂತ್ಯದ ವೇಳೆಗೆ ಕೇಸ್‌ಗಳು 15ರಿಂದ 25 ಸಾವಿರಕ್ಕೆ ಇಳಿಕೆ ಆಗುವ ಸಾಧ್ಯತೆ ಇದೆ. ಅದನ್ನು 2ನೇ ಅಲೆಯ ಅಂತ್ಯ ಎಂದು ನಾವು ವಿಶ್ಲೇಷಿಸಬಹುದು. ಮೂರನೇ ಅಲೆಯನ್ನು ತಡೆಯಬೇಕಾದರೆ ಶೇ.50ರಿಂದ 60ರಷ್ಟುವಯಸ್ಕರಿಗೆ ಅಂದರೆ ಅಂದಾಜು 55 ಕೋಟಿ ಜನರಿಗೆ ಲಸಿಕೆ ನೀಡಬೇಕಿದೆ. 3ನೇ ಅಲೆ ತಡೆಯಲು ಮೊದಲ ಡೋಸ್ ಸಾಕಾಗಲಿದೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ. ಒಂದು ವೇಳೆ ಮುಂದಿನ ವರ್ಷದ ಜನವರಿಯ ವೇಳೆಗೆ 100 ಕೋಟಿ ಡೋಸ್ ಲಸಿಕೆ ನೀಡಿದರೆ ಸಾಕಾಗಬಹುದು. ಇನ್ನೂ ಹೆಚ್ಚು ಆದರೆ ಒಳ್ಳೆಯದು' ಎಂದು ಹೇಳಿದ್ದಾರೆ.