ಶಿಕ್ಷಕರು, ಲೈನ್‌ಮೆನ್‌ಗಳು, ಎಲ್‌ಪಿಜಿ ಹುಡುಗರು 'ಫ್ರಂಟ್‌ಲೈನ್‌ ವಾರಿಯರ್ಸ್'

-ರಾಜ್ಯ ಸರ್ಕಾರದಿಂದ 1250 ಕೋಟಿ ರು. ವಿಶೇಷ ನೆರವು ಘೋಷಣೆ

- ಶಿಕ್ಷಕರು, ಲೈನ್‌ಮೆನ್‌ಗಳು, ಎಲ್‌ಪಿಜಿ ಹುಡುಗರಿಗೆ ಲಸಿಕೆ ನೀಡಲು ಆದ್ಯತೆ

- ಸ್ವಸಹಾಯ ಸಂಘದ ಸಾಲ ಪಾವತಿ 3 ತಿಂಗಳು ವಿಸ್ತರಣೆ

First Published May 20, 2021, 7:12 PM IST | Last Updated May 20, 2021, 7:38 PM IST

ಬೆಂಗಳೂರು (ಮೇ. 20): ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಸೆಮಿ ಲಾಕ್‌ಡೌನ್‌  ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಶ್ರಮಿಕ ವರ್ಗಕ್ಕೆ 1250 ಕೋಟಿ ರು. ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್‌ ಅನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಘೋಷಣೆ ಮಾಡಿದ್ದಾರೆ.

1250 ಕೋಟಿ ರೂ ಪ್ಯಾಕೇಜ್ ಬೆನ್ನಲ್ಲೇ ಮತ್ತೊಂದು ಆರ್ಥಿಕ ಪರಿಹಾರಕ್ಕೆ ಸಿಎಂ ಚಿಂತನೆ!

ಶಿಕ್ಷಕರು, ಲೈನ್‌ಮೆನ್‌ಗಳು, ಎಲ್‌ಪಿಜಿ ಹುಡುಗರನ್ನೂ ಫ್ರಂಟ್‌ಲೈನ್‌ ವಾರಿಯರ್ಸ್ ಎಂದು ಘೋಷಿಸಿದ್ಧಾರೆ. ರೈತರು, ಕಟ್ಟಡ ಕಾರ್ಮಿಕರು, ಆಟೋ, ಕ್ಯಾಬ್ ಚಾಲಕರು, ಕಲಾವಿದರು, ಬೀದಿ ಬದಿ ವ್ಯಾಪಾರಿಗಳಿಗೆ ಪ್ಯಾಕೇಜ್‌ ನೆರವು ಸಿಗಲಿದೆ. ಇವೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.